ನವದೆಹಲಿ: ಭಾರತ ಡಿಜಟಲ್ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರು ಪ್ರಕಾರ, 2022ರ ವೇಳೆಗೆ ನಮ್ಮ ದೇಶದ ಡಿಜಿಟಲ್ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ಮಟ್ಟವನ್ನು ತಲುಪಲಿದೆ.
‘2022ರ ವೇಳೆ ನಮ್ಮ ಡಿಜಿಟಲ್ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ಆಗುವ ನಿರೀಕ್ಷೆ ಇದೆ, ಇದು ಮುಂದುವರೆದು 2030ರ ವೇಳೆಗೆ ನಮ್ಮ ದೇಶದ ಡಿಜಿಟಲ್ ಆರ್ಥಿಕತೆ ಒಟ್ಟು ಆರ್ಥಿಕತೆಯ ಅರ್ಧದಷ್ಟಾದುವ ನಿರೀಕ್ಷೆ ಇದೆ’ ಎಂದು ಗಾರ್ಗ್ ಹೇಳಿದ್ದಾರೆ.
ಪ್ರಸ್ತುತ ವಿಶ್ವದ 6ನೇ ಅತೀದೊಡ್ಡ ಆರ್ಥಿಕತೆಯಾಗಿರುವ ಭಾರತ 2022ರ ವೇಳೆಗೆ 5ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಶೇ.7-8ರಷ್ಟು ಪ್ರಗತಿ ದರ ಸಾಮಾನ್ಯವಾಗಿದೆ. ಆದರೆ ಶೇ.8ಕ್ಕಿಂತ ಹೆಚ್ಚು ಪ್ರಗತಿ ದರವನ್ನು ಪಡೆಯಲು ನಾವು ಇನ್ನಷ್ಟು ಶ್ರಮಪಡಬೇಕು. ಪ್ರಸ್ತುತ ಆರ್ಥಿಕತೆ ಸ್ಥಿರವಾಗಿದೆ, ಮುಂದೆ ಒಳ್ಳೆ ಕಾಲ ಬರಲಿದೆ, ನಮ್ಮ ಶ್ರಮ ದುಪ್ಪಾಟಗಬೇಕಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.