ಭುವನೇಶ್ವರ: 9 ದಿನಗಳ ವಿಶ್ವ ಪ್ರಸಿದ್ಧ ಜಗನ್ನಾಥ ರಥಯಾತ್ರೆ ಶನಿವಾರ ಆರಂಭಗೊಂಡಿದ್ದು ಓರಿಸ್ಸಾದ ಪುರಿಯಲ್ಲಿ ಭಾರಿ ಬಂದೋಬಸ್ತಗಳನ್ನು ಏರ್ಪಡಿಸಲಾಗಿದೆ. ದೇಶ ವಿದೇಶಗಳಿಂದ ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಜಗನ್ನಾಥ ರಥಯಾತ್ರೆಗೆ ಶುಭ ಕೋರಿದ್ದು “ಜಗನ್ನಾಥನ ಕೃಪೆಯಿಂದ ನಮ್ಮ ದೇಶದ ಪ್ರಗತಿ ಉತ್ತುಂಗವನ್ನು ತಲುಪಲಿ. ಪ್ರತಿ ಭಾರತೀಯನೂ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗಲಿ” ಎಂದಿದ್ದಾರೆ. ಅಲ್ಲದೇ ಜಗನ್ನಾಥ ದೇವಾಲಯದ ಮೂರು ಪ್ರಸಿದ್ಧ ದೇವರುಗಳ ಮೂರ್ತಿಯ ಭಾವಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ಮೋದಿಯವರು ಜಗನ್ನಾಥ ದೇಗುಲಕ್ಕೆ ಹೆಸರುಬೇಳೆ, ದಾಳಿಂಬೆ ಮತ್ತು ಮಾವಿನ ಹಣ್ಣುಗಳನ್ನೊಳಗೊಂಡ ಕಾಣಿಕೆಯನ್ನು ಸಮರ್ಪಿಸಿದ್ದಾರೆ ಎಂದು ದೇಗುಲದ ಅರ್ಚಕ ದೀಲಿಪ್ ದಾಸ್ಜಿ ಮಹಾರಾಜ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.