ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ವಿಷಪೂರಿತ ಗಾಳಿ ಅಲ್ಲಿನ ಜನರನ್ನು ತತ್ತರಗೊಳಿಸಿದೆ. ಸದ್ಯ ಮಳೆಗಾಲವಾದ್ದರಿಂದ ಧೂಳಿನ ಕಾಟ ತುಸು ತಗ್ಗಿದೆ. ಆದರೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕೆಡುವುದರಿಂದ ಹಲವಾರು ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಲಾಗುತ್ತಿದೆ.
ಪರಿಸರ ಸಚಿವಾಲಯವು ದೆಹಲಿಯ ವಾಯು ಮಾಲಿನ್ಯವನ್ನು ತಡೆಗಟ್ಟಲು 3 ಪ್ರಾಯೋಗಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಜ್ಜಾಗಿದೆ. ಬಸ್ಗಳಲ್ಲಿ ಫಿಲ್ಟರ್ಗಳನ್ನು ಅಳವಡಿಸುವುದು, ಧೂಳನ್ನು ವಿಂಗಡಿಸುವ ಕೆಮಿಕಲ್ ಸ್ಪ್ರೇ ಬಳಕೆ ಮತ್ತು ಧೂಳಿನಲ್ಲಿನ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಪರಿಗಳನ್ನು ಅಳುವಡಿಸುವ ನಿರ್ಧಾರ ಮಾಡಲಾಗಿದೆ.
ಈ ತಿಂಗಳ ಅಂತ್ಯದೊಳಗೆ ‘ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ’ ಅಂತ್ಯಗೊಳ್ಳಲಿದ್ದು, ಬಳಿಕ ಪ್ರಾಯೋಗಿಕವಾಗಿ ಜಾರಿಗೆ ತರುವ ಯೋಚನೆ ಮಾಡಲಾಗಿದೆ.
ನ್ಯಾಷನಲ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ರಿಸಚ್ ಇನ್ಸ್ಟಿಟ್ಯೂಟ್ಗೆ ಪ್ರಾಯೋಗಿಕ ಯೋಜನೆಗಳ ಜವಾಬ್ದಾರಿಯನ್ನು ನೀಡಲಾಗುತ್ತಿದ್ದು, ಅದು ಪರಿಕರಗಳ ಅಳವಡಿಕೆ ಮಾಡಲಿದೆ.
ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಇಂತಹ ಮಹತ್ವದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಅತ್ಯಗತ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.