ನವದೆಹಲಿ: ತೈಲ ಪೂರೈಕೆಯಲ್ಲಿ ಭಾರತಕ್ಕೆ ನೀಡುತ್ತಿರುವ ವಿಶೇಷ ಸ್ಥಾನಮಾನವನ್ನು ಅಂತ್ಯಗೊಳಿಸುವ ಬಗ್ಗೆ ನಿನ್ನೆ ಎಚ್ಚರಿಕೆ ನೀಡಿದ್ದ ಇರಾನ್ ಇಂದು ತನ್ನ ವರಸೆ ಬದಲಾಯಿಸಿದೆ. ತೈಲ ಪೂರೈಕೆಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಭರವಸೆಯನ್ನು ಭಾರತಕ್ಕೆ ನೀಡುತ್ತೇವೆ, ನವದೆಹಲಿ ನಮ್ಮ ವಿಶ್ವಾಸಾರ್ಹ ಇಂಧನ ಪಾಲುದಾರ ಎಂದಿದೆ.
ಅಸ್ಥಿರ ಇಂಧನ ಮಾರುಕಟ್ಟೆಯೊಂದಿಗೆ ವ್ಯವಹರಿಸುತ್ತಿರುವ ನವದೆಹಲಿಯ ಸವಾಲುಗಳನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು, ತೈಲ ಪೂರೈಕೆದಾರರ ವಿಶ್ವಾಸಾರ್ಹತೆ, ಭೂ, ರಾಜಕೀಯ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ತನ್ನ ಇಂಧನ ಪಾಲುದಾರನನ್ನು ಆಯ್ಕೆ ಮಾಡುವ ಹಕ್ಕು ಭಾರತಕ್ಕಿದೆ ಎಂದಿದೆ.
ಯುಎಸ್, ರಷ್ಯಾ, ಸೌದಿಗಳಿಂದ ತೈಲ ಆಮದು ಮಾಡಿಕೊಳ್ಳುವ ಸಲುವಾಗಿ ಭಾರತ ಇರಾನ್ನಿಂದ ಮಾಡುತ್ತಿರುವ ತೈಲ ಆಮದನ್ನು ಕಡಿತಗೊಳಿಸಿದರೆ ನಾವು ಅದಕ್ಕೆ ನೀಡುತ್ತಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯುತ್ತೇವೆ ಎಂದು ನಿನ್ನೆ ಇರಾನ್ನ ಉಪ ರಾಯಭಾರಿ ಮಸೂದ್ ರಿಝ್ವಾನಿಯನ್ ರಹಗಿ ಎಚ್ಚರಿಸಿದ್ದರು.
ಇದಕ್ಕೆ ಇಂದು ಸ್ಪಷ್ಟನೆ ನೀಡಿರುವ ಇರಾನ್ ರಾಯಭಾರ ಕಛೇರಿ, ಭಾರತ ನಮ್ಮ ವಿಶ್ವಾಸಾರ್ಹ ಇಂಧನ ಪಾಲುದಾರನಾಗಿದ್ದು, ತೈಲ ಪೂರೈಕೆಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಭರವಸೆ ನೀಡುತ್ತೇವೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.