ನವದೆಹಲಿ: ಫ್ರಾನ್ಸ್ನ್ನು ಹಿಂದಿಕ್ಕಿ ಭಾರತ ವಿಶ್ವದ 6ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, 2017ರಲ್ಲಿ ಭಾರತದ ಜಿಡಿಪಿ 50 ಟ್ರಿಲಿಯನ್ ಡಾಲರ್ ಇದ್ದು, ಫ್ರಾನ್ಸ್ನ ಜಿಡಿಪಿ 2.58 ಟ್ರಿಲಿಯನ್ ಡಾಲರ್ ಇದೆ. ಆದರೆ ಭಾರತದ ಜನಸಂಖ್ಯೆ 1.34 ಬಿಲಿಯನ್, ಫ್ರಾನ್ಸ್ ಜನಸಂಖ್ಯೆ 67 ಮಿಲಿಯನ್. ಹೀಗಾಗಿ ಫ್ರಾನ್ಸ್ನ ತಲಾ ಆದಾಯ ಭಾರತಕ್ಕಿಂತ 20 ಪಟ್ಟು ಹೆಚ್ಚಿದೆ.
ನೋಟ್ ಬ್ಯಾನ್, ಜಿಎಸ್ಟಿ ಅನುಷ್ಠಾನದ ಬಳಿಕ ಕೆಲವು ತ್ರೈಮಾಸಿಕದವರೆಗೆ ಭಾರತದ ಆರ್ಥಿಕತೆ ನಿಧಾನಗತಿಗೆ ಸಾಗಿದರೂ ಈಗ ಅದು ಸಂಪೂರ್ಣ ಚೇತರಿಕೆಯನ್ನು ಕಂಡಿದೆ. ಇತ್ತೀಚಿಗಷ್ಟೇ ಸೆಂಟರ್ ಫಾರ್ ಎಕನಾಮಿಕ್ಸ್ ಆಂಡ್ ಬ್ಯುಸಿನೆಸ್ ರಿಸರ್ಚ್ ಕನ್ಸಲ್ಟೆನ್ಸಿ ಕೂಡ ಭಾರತ 2032ರ ವೇಳೆಗೆ ಫ್ರಾನ್ಸ್ ಮತ್ತು ಬ್ರಿಟನನ್ನು ಹಿಂದಿಕ್ಕಿ ವಿಶ್ವದ ಅತೀದೊಡ್ಡ ಆರ್ಥಿಕತೆಯಾಗುತ್ತದೆ ಎಂದಿತ್ತು.
2018ರಲ್ಲಿ ಭಾರತದ ಆರ್ಥಿಕತೆ ಶೇ.7.3ರಷ್ಟು ಮತ್ತು ಮುಂದಿನ ಎರಡು ವರ್ಷದಲ್ಲಿ ಶೇ 7.5ರಷ್ಟು ಏರಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್ ವರದಿ ಭವಿಷ್ಯ ನುಡಿದಿದೆ. ಎಲ್ಲವೂ ಸುಗಮವಾದರೆ ಶೀಘ್ರದಲ್ಲೇ ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕತೆಯಾಗಲಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.