ನವದೆಹಲಿ: ಮಹಾರಾಷ್ಟ್ರ ಮತ್ತು ರಾಜಸ್ಥಾನದ ಸರ್ಕಾರಗಳು ‘ಆಯುಷ್ಮಾನ್ ಭಾರತ’ ಯೋಜನೆಗೆ ಸಂಪೂರ್ಣವಾಗಿ ಬೆಂಬಲ ನೀಡಿವೆ ಎಂಬುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಈ ಎರಡು ರಾಜ್ಯಗಳು ‘ಆಯುಷ್ಮಾನ್ ಭಾರತ್’ ಯೋಜನೆಗೆ ಒಳಪಡಲು ಹಿಂದೇಟು ಹಾಕುತ್ತಿವೆ ಎಂಬ ವರದಿಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಕೇಂದ್ರ, ಎರಡೂ ರಾಜ್ಯಗಳ ಯೋಜನೆಗೆ ಬೆಂಬಲ ನೀಡಿವೆ ಎಂದಿದೆ.
‘ಎರಡೂ ರಾಜ್ಯಗಳು ಆಯುಷ್ಮಾನ್ ಭಾರತ್ ಯೋಜನೆಯನ್ನು ಬೆಂಬಲಿಸಿವೆ, ಯೋಜನೆಗೆ ಒಳಪಡಲು ಹಿಂದೇಟು ಹಾಕುತ್ತಿಲ್ಲ. ಎರಡೂ ರಾಜ್ಯಗಳ್ಳಲ್ಲೂ ಬಲಿಷ್ಠ ಆರೋಗ್ಯ ವಿಮಾ ಯೋಜನೆಗಳಿವೆ, ಅವುಗಳ ಪ್ರಸ್ತುತ ಅನುಷ್ಠಾನದಲ್ಲಿವೆ’ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಮಹಾರಾಷ್ಟ್ರದಲ್ಲಿ ‘ಜ್ಯೋತಿ ಬಾ ಫುಲೆ ಜನ್ ಆರೋಗ್ಯ ಯೋಜನೆ’ 2012ರಿಂದ ಜಾರಿಯಲ್ಲಿದ್ದು, 2.24 ಕೋಟಿ ಕುಟುಂಬ ಇದರ ವ್ಯಾಪ್ತಿಯಲ್ಲಿದೆ. ವರ್ಷಕ್ಕೆ 1.5 ಲಕ್ಷ ಮಂದಿಗೆ ಇದರಿಂದ ಪ್ರಯೋಜನವಾಗುತ್ತಿದೆ.
ರಾಜಸ್ಥಾನದಲ್ಲಿ 2015ರಿಂದ ಭಾಮಶಾ ಆರೋಗ್ಯ ಯೋಜನೆ ಜಾರಿಯಲ್ಲಿದೆ, ಇದರಿಂದ 92 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.