ಲಕ್ನೋ: ಉತ್ತರಪ್ರದೇಶದ ಪ್ರಸಿದ್ಧ ಅಲಹಾಬಾದ್ ನಗರದ ಹೆಸರನ್ನು ’ಪ್ರಯಾಗ್’ ಎಂದು ಮರು ನಾಮಕರಣಗೊಳಿಸುವಂತೆ ಯುಪಿ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಮನವಿ ಮಾಡಿದ್ದಾರೆ.
‘ಬಾಂಬೆ’ ಹೆಸರನ್ನು ‘ಮುಂಬಯಿ’ ಎಂದು ಮರುನಾಮಕರಣಗೊಳಿಸುವಲ್ಲಿ ರಾಮ್ ನಾಯ್ಕ್ ಅವರ ಕೊಡುಗೆ ಅಪಾರವಿದೆ. ಅಂತೆಯೇ ಅಲಹಾಬಾದ್ ಹೆಸರನ್ನು ಪ್ರಯಾಗ್ ಎಂದು ಮರುನಾಮಕರಣಗೊಳಿಸಲು ಅವರು ಮುಂದಾಗಬೇಕಾಗಿ ವಿನಂತಿಸುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲಹಾಬಾದ್ ನಗರದ ಹೆಸರನ್ನು ಪ್ರಯಾಗ್ ಎಂದು ಬದಲಾಯಿಸಲು ಒತ್ತಾಯ ಕೇಳಿ ಬರುತ್ತಿದೆ.
ಅಲಹಾಬಾದ್ ‘ಮಹಾಕುಂಭ’ ಮತ್ತು ‘ತ್ರಿವೇಣೀ ಸಂಗಮ’ಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.