×
Home About Us Advertise With s Contact Us

ಒಂದೇ ವರ್ಷದಲ್ಲಿ ರೈತರ ಖಾತೆಗಳಿಗೆ ರೂ.35,000 ಕೋಟಿ ಜಮೆ: ಶಿವರಾಜ್ ಸಿಂಗ್ ಚೌಹಾಣ್

ದೆವಾಸ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರ ಕಳೆದ ಒಂದು ವರ್ಷ(2017)ದಲ್ಲಿ ವಿವಿಧ ರಾಜ್ಯಗಳ ಯೋಜನೆಗಳ ಭಾಗವಾಗಿ ರೈತರ ಖಾತೆಗಳಿಗೆ 35,000 ಕೋಟಿ ರೂಪಾಯಿಗಳನ್ನು ಜಮೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಶನಿವಾರ ದೆವಾಸ್‌ನಲ್ಲಿ ನಡೆದ ’ಕಿಸಾನ್ ಮಹಾಸಮ್ಮೇಳನ’ ಕಾರ್ಯಕ್ರಮದಲ್ಲಿ, ವಿವಿಧ ರಾಜ್ಯ ಮತ್ತು ಕೇಂದ್ರದ ರೈತಪರ ಯೋಜನೆಗಳ ಫಲಾನುಭವಿಗಳಿಗೆ ಅನುಮೋದನೆ ಪತ್ರಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಅವರು, ’ಕಳೆದ ಒಂದು ವರ್ಷದಲ್ಲಿ ಮಧ್ಯಪ್ರದೇಶದ ರೈತರ ಬ್ಯಾಂಕ್ ಖಾತೆಗಳಲ್ಲಿ ವಿವಿಧ ಯೋಜನೆಗಳ ಭಾಗವಾಗಿ ಸುಮಾರು 35,000 ಕೋಟಿ ಹಣಕಾಸು ನೆರವು ನೀಡಲಾಗಿದೆ’ ಎಂದು ಹೇಳಿದ್ದಾರೆ.

’ನರ್ಮದೆಯ ಆಶೀರ್ವಾದದೊಂದಿಗೆ, ಇಂದು ದಿವಸ್‌ನಲ್ಲಿ ಕುಡಿಯುವ ನೀರು ಅನುಕೂಲಕರವಾಗಿ ಲಭ್ಯವಾಗಿದೆ. ನದಿ ಜೋಡಣೆಯ ಭಾಗಗಳಾದ ನರ್ಮದಾ-ಕಾಳಿಸಿಂಧ್ ಪಾರ್ಟ್-1 ಮತ್ತು ಪಾರ್ಟ್-2 ಹಾಗೂ ನರ್ಮದಾ-ಗಂಭೀರ್ ಪಾರ್ಟ್-1 ಮತ್ತು ಪಾರ್ಟ್-2ಗಳಿಗೆ ಕೂಡ ನೀರಾವರಿ ಯೋಜನೆಗಳನ್ನು ತಯಾರಿಸಲಾಗಿದೆ’ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

 

Recent News

Pungava 01-10-2018
1 day ago  
Back To Top
error: Content is protected !!