ನವದೆಹಲಿ: ಬಾಲ್ಯವಿವಾಹ ಪದ್ಧತಿಯನ್ನು ಅಪರಾಧಗೊಳಿಸಿದ್ದರೂ ನಮ್ಮ ದೇಶದಲ್ಲಿ ಇನ್ನೂ ಬಾಲ್ಯವಿವಾಹಗಳು ನಡೆಯುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕಾರ್ಯೋನ್ಮುಖವಾಗಿರುವ ಸರ್ಕಾರ ಬಾಲ್ಯ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಿದೆ.
ಮೂಲಗಳ ಪ್ರಕಾರ, ಇನ್ನು ಮುಂದೆ ನಡೆಯಲಿರುವ ಎಲ್ಲಾ ಬಾಲ್ಯ ವಿವಾಹಗಳನ್ನು ಅಸಿಂಧುಗೊಳಿಸುವ ಮಹತ್ವದ ಕಾನೂನನ್ನು ತರಲು ಕೇಂದ್ರ ನಿರ್ಧರಿಸಿದೆ. ಇದುವರೆಗೆ ಬಾಲ್ಯವಿವಾಹ ಅಪರಾಧವಾದರೂ ಈ ವಿವಾಹಕ್ಕೆ ಒಳಪಟ್ಟ ಬಳಿಕ ಇಬ್ಬರ ಒಪ್ಪಿಗೆಯ ಮೇರೆಗೆ ಮದುವೆ ಸಿಂಧು ಆಗಿತ್ತು. ಆದರೆ ಇನ್ನು ಮುಂದೆ ಮದುವೆ ಅಸಿಂಧು ಆಗಲಿದೆ.
ಹೆಣ್ಣು ಮಕ್ಕಳ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಬಾಲ್ಯವಿಹಾಹ ಕಾಯ್ದೆಗೆ ತಿದ್ದುಪಡಿ ತರಲಿದೆ, ಇದರನ್ವಯ ಸರ್ಕಾರದ ಕಣ್ಣು ತಪ್ಪಿಸಿ ಬಾಲ್ಯ ವಿವಾಹವಾದರೂ ಅದು ಅಸಿಂಧು ಆಗಲಿದೆ. ಕಾನೂನಿನಲ್ಲಿ ಅದಕ್ಕೆ ಯಾವುದೇ ಮಹತ್ವವೂ ಇರುವುದಿಲ್ಲ. ವಿವಾಹಕ್ಕೊಳಪಟ್ಟವರನ್ನು ಸತಿ-ಪತಿ ಎಂದೂ ಪರಿಗಣಿಸಲಾಗುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.