ನವದೆಹಲಿ: ಡಯಾಬಿಟಿಸ್ನಂತಹ ರೋಗಗಳಿಗೆ ನಿತ್ಯ ಇನ್ಸುಲಿನ್ ಚುಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ. ಇದು ರೋಗಿಗಳಿಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಈ ಹಿನ್ನಲೆಯಲಿ ವಿಜ್ಞಾನಿಗಳ ತಂಡ ಇನ್ಸುಲಿನ್ ಪಿಲ್ಸ್ ಹೊರತರುವ ನಿಟ್ಟಿನಲ್ಲಿ ಸಂಶೋಧನೆಯನ್ನು ನಡೆಸುತ್ತಿದೆ.
ಟೈಪ್ 1 ಡಯಾಬಿಟಿಸ್ ಇರುವ ರೋಗಿಗಳ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು ಇನ್ಸುಲಿನ್ ಅಗತ್ಯವಾಗಿರುತ್ತದೆ. ಆದರೆ ಪ್ರತಿನಿತ್ಯ ಇನ್ಸುಲಿನ ಚುಚ್ಚಿಸಿಕೊಳ್ಳುವುದು ಒಂದು ರೀತಿಯ ಕಿರಿಕಿರಿ, ಹಿಂಸೆ, ಅಸಹ್ಯವನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಇನ್ಸುಲಿನ್ ಪಿಲ್ಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳ ತಂಡ ಅವಿರತವಾಗಿ ಶ್ರಮಿಸುತ್ತಿದೆ.
ಇನ್ಸುಲಿನನ್ನು ಮಾತ್ರೆಯ ರೂಪದಲ್ಲಿ ಸೇವಿಸಿದರೆ ಇನ್ಸುಲಿನ್ ಜಠರದಲ್ಲಿನ ಗ್ಯಾಸ್ಟ್ರಿಕ್ ಆಮ್ಲದ ಸಂಪರ್ಕಕ್ಕೆ ಬಂದು ನಾಶವಾಗುತ್ತದೆ. ಈ ಪ್ರಕ್ರಿಯೆಯನ್ನು ತಪ್ಪಿಸಿ, ನೇರವಾಗಿ ರಕ್ತ ಸೇರುವಂತಹ ಮಾತ್ರೆಗಳನ್ನು ಅಭಿವೃದ್ಧಿಪಡಿಸಲು ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಈಗ ಇಂಗ್ಲೆಂಡಿನ ಕೇಂಬ್ರಿಡ್ಜ್ನ ಹಾರ್ವರ್ಡ್ ಪಾಲ್ ಜಾನ್ಸನ್ ಕಾಲೇಜಿನ ವಿಜ್ಞಾನಿಗಳು ಈ ನಿಟ್ಟಿ ಕಾರ್ಯಪ್ರವೃತ್ತರಾಗಿದ್ದು, ತಮ್ಮ ಗುರಿ ತಲುಪುವ ಸನಿಹದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.