ಐಐಟಿ ಕಾನ್ಪುರ್ ಇದರ ಸಹಯೋಗದಲ್ಲಿ ಉತ್ತರಪ್ರದೇಶದ ಬರಪೀಡಿತ ಪ್ರದೇಶಗಳಲ್ಲಿ ಕೃತಕ ಮಳೆಯನ್ನು ಬರಿಸುವ ಯೋಜನೆಯನ್ನು ಯೋಗಿ ಆದಿತ್ಯನಾಥ ಸರಕಾರ ಹಮ್ಮಿಕೊಂಡಿದೆ. ವಾತಾವರಣದಲ್ಲಿ ಸಿಲ್ವರ್ ಅಯೋಡೈಡ್ ಹಾಗೂ ಇತರ ಗ್ಯಾಸ್ ಗಳನ್ನು ಸೇರಿಸಿ ಕೃತಕವಾಗಿ ಮೋಡಗಳನ್ನು ಸಂಚಯನಮಾಡಿ ಮಳೆಯಾಗುವಂತೆ ಮಾಡುವುದು ಈ ಯೋಜನೆಯಾಗಿದೆ. ಈ ಯೋಜನೆಯನ್ನು ಮೊದಲು ಬುಂದೇಲ್ ಖಂಡ್ ಪ್ರದೇಶದಲ್ಲಿ ಜಾರಿಗೊಳಿಸಿ ಕ್ರಮೇಣ ಉತ್ತರಪ್ರದೇಶದ ಇತರ ಬರಪೀಡಿತ ಪ್ರದೇಶಗಳಿಗೆ ವಿಸ್ತರಿಸಲಾಗುತ್ತದೆ. 5.5 ಕೋಟಿ ವೆಚ್ಚದ ಈ ಯೋಜನೆಯಲ್ಲಿ 1000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಮಳೆ ಬರಿಸಬಹುದಾಗಿದೆ. ಈ ತಂತ್ರಜ್ಞಾನದಕ್ಕೆ ಬೇಕಾಗಿ ಮೊದಲು ಚೈನಾ ದೇಶದ ಕಂಪೆನಿಯ ಜೊತೆಗೆ 11 ಕೋಟಿ ರುಪಾಯಿ ಯ ಒಪ್ಪಂದ ಮಾಡಿಕೊಳ್ಳಲಾಗಿತ್ತು.ಆದರೆ ನಂತರ ಚೈನಾವು ಈ ತಂತ್ರಜ್ಞಾನವನ್ನು ಕೊಡಲು ಹಿಂದೇಟು ಹಾಕಿತು. ಉತ್ತರಪ್ರದೇಶ ಸರಕಾರವು ಈ ವಿಚಾರವಾಗಿ ಐ ಐ ಟಿ ಕಾನ್ಪುರ್ ನ್ನು ಸಂಪರ್ಕಿಸಿತು. ಉತ್ತರ ಪ್ರದೇಶ ಸರಕಾರದ ಕೋರಿಕೆಯಂತೆ ಐ ಐ ಟಿ ಕಾನ್ಪುರ್ ತಂಡವು ಕೃತಕ ಮಳೆಯ ತಂತ್ರಜ್ಞಾನವನ್ನು ದೇಶೀಯವಾಗಿ ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಿದೆ. ಅದೂ ಕೂಡ ಚೀನಾದ ತಂತ್ರಜ್ಞಾನದ ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.