ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಆದರ್ಶ ಗ್ರಾಮ ಯೋಜನೆ ಇದೀಗ 12 ಹೊಸ ಕಾರ್ಯಕ್ರಮಗಳನ್ನು ಒಳಗೊಂಡಿದೆ ಮತ್ತು ಹೆಚ್ಚಿನ ಗ್ರಾಮಗಳಿಗೆ ವಿಸ್ತರಣೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 14ರಂದು ಗ್ರಾಮ ಸ್ವರಾಜ್ ಅಭಿಯಾನವನ್ನು ಆರಂಭಿಸಿದ್ದರು, ಗ್ರಾಮಗಳ ಪ್ರತಿ ಮನೆಗೆ ವಿದ್ಯುತ್, ವಿಮೆ, ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಮೂಲಕ ಗ್ರಾಮಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ 115 ಗ್ರಾಮಗಳನ್ನು ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗ ಆಯ್ಕೆ ಮಾಡಿದೆ.
ಮೊದಲ ಹಂತವಾಗಿ ಈ ಯೋಜನೆಯಡಿ, ಎಲ್ಪಿಜಿ, ಎಲ್ಇಡಿ ಬಲ್ಬ್, ವಿದ್ಯುತ್, ಜನಧನ ಅಕೌಂಟ್, ಅಪಘಾತ ಮತ್ತು ಜೀವ ವಿಮೆ, ಮಿಶನ್ ಇಂದ್ರಧನುಷ್ಗಳನ್ನು ಸೇರಿಸಲಾಗಿದೆ. ಇನ್ನೊಂದು ಹಂತದಲ್ಲಿ ಶಾಲೆಗಳ ಅಭಿವೃದ್ಧಿ, ಪೌಷ್ಠಿಕತೆ, ಆರೋಗ್ಯ ಸೇವೆ, ಕೃಷಿ ಯೋಜನೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಮೊದಲು 16,850 ಗ್ರಾಮಗಳು ಈ ಯೋಜನೆಗೊಳಪಟ್ಟಿದ್ದವು. ಈಗ ಇವುಗಳ ಸಂಖ್ಯೆ 49,177 ಗ್ರಾಮಗಳಿಗೆ ವಿಸ್ತರಣೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.