ನವದೆಹಲಿ: ಭಾರತದ ಪ್ರವಾಸೋದ್ಯಮವನ್ನು ಪ್ರಚುರಪಡಿಸುವಂತೆ ಅಮೆರಿಕಾದಲ್ಲಿ ನೆಲೆಸಿರುವ ಪಟೇಲ್ ಸಮುದಾಯದ ಅನಿವಾಸಿ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಶುಕ್ರವಾರ ಅಮೆರಿಕಾದ ಇಂಟರ್ನ್ಯಾಷನಲ್ ಕನ್ವೆನ್ಷನ್ ಆಫ್ ಸೌರಾಷ್ಟ್ರ ಪಟೇಲ್ ಕಲ್ಚುರಲ್ ಸಮಾಜವನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡಿದರು.
‘ನೀವು ‘ಹೋಟೆಲ್ ಮೋಟೆಲ್ ಪಟೇಲ್ ವಾಲಾಸ್’ ಎಂದು ಗುರುತಿಸಿಕೊಂಡಿದ್ದೀರಿ, ನಿಮ್ಮ ಸಮುದಾಯದ ತಲಾ ಒಬ್ಬರು ಐವರನ್ನು ಭಾರತಕ್ಕೆ ಪ್ರವಾಸಕ್ಕೆ ತೆರಳುವಂತೆ ಪ್ರಭಾವಿಸಬಹುದಲ್ಲವೇ? ನಿಮ್ಮ ಹೋಟೆಲ್/ಮೋಟೆಲ್ಗೆ ಅತಿಥಿಗಳು ಬಂದಾಗ ಅವರಿಗೆ ಭಾರತ ಪ್ರವಾಸೋದ್ಯಮದ ಬಗ್ಗೆ ಐದು ನಿಮಿಷಗಳ ವೀಡಿಯೋ ತೋರಿಸಿ, ಇದರಿಂದ ಅವರು ಭಾರತಕ್ಕೆ ಬರಲು ಮನಸ್ಸು ಮಾಡಬಹುದು’ ಎಂದರು.
ಭಾರತವನ್ನು ಹೆಮ್ಮೆಪಡಿಸುತ್ತಿರುವ ಅನಿವಾಸಿ ಭಾರತೀಯರ ಕಾರ್ಯವನ್ನು ಶ್ಲಾಘಿಸಿದ ಅವರು, ಭಾರತದ ಪಾಸ್ಪೋರ್ಟ್ನ ಘನತೆ ವಿಶ್ವದಾದ್ಯಂತ ಹೆಚ್ಚಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.