ನವದೆಹಲಿ: ಭಾರತದ ಭವ್ಯ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಅಧ್ಯಯನ ನಡೆಸಲು ಆಸಕ್ತಿ ಇರುವವರಿಗಾಗಿ ದೇಶದ ಉನ್ನತ ಕಲಾ ಸಂಸ್ಥೆ-ಇಂದಿರಾ ಗಾಂಧಿ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ಸುವರ್ಣಾವಕಾಶ ಕಲ್ಪಿಸಿದೆ. ಕಲೆ ಮತ್ತು ಸಂಸ್ಕೃತಿಯಲ್ಲಿ 5 ಡಿಪ್ಲೋಮಾ ಕೋರ್ಸ್ ಮತ್ತು 6 ಹೊಸ ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸಿದೆ.
IGNCA ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಡಿ ಇರುವ ಸ್ವಾಯತ್ತ ಸಂಸ್ಥೆಯಾಗಿದೆ. ವಿಷಯ ಪರಿಶೋಧನ ವ್ಯವಸ್ಥೆಯನ್ನು ವಿನ್ಯಾಸ ಮತ್ತು ಅಭಿವೃದ್ಧಿ ಪಡಿಸಲು ಎಲ್ಲಾ ಆಯಾಮ ಮತ್ತು ಮಾಹಿತಿ ತಂತ್ರಜ್ಞಾನದೊಂದಿಗೆ ಕಲೆ ಮತ್ತು ಸಂಸ್ಕೃತಿಯನ್ನು ರಚಿಸುವುದು IGNCA ಆರಂಭಿಸಿರುವ ಹೊಸ ಕೋರ್ಸುಗಳ ಮೂಲ ಉದ್ದೇಶವಾಗಿದೆ.
ನಮ್ಮ ಪ್ರಾಚೀನ ಜ್ಞಾನ, ಸಾಧನೆಗಳು ಇಂದಿನ ಮಲ್ಟಿಮೀಡಿಯಾ ವೇದಿಕೆಗಳಲ್ಲೂ ಲಭ್ಯವಾಗಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯೂ ಇದಾಗಿದೆ. ಇದರಿಂದಾಗಿ ಪ್ರಾಚೀನ ಮತ್ತು ಆಧುನಿಕ ಜ್ಞಾನದ ನಡುವೆ ಕೊಂಡಿ ಏರ್ಪಡಲಿದೆ.
ಪಿ.ಜಿ. ಡಿಪ್ಲೊಮಾ ಇನ್ ಕಲ್ಚರಲ್ ಇನ್ಫರ್ಮ್ಯಾಟಿಕ್ಸ್
ಪಿ.ಜಿ. ಡಿಪ್ಲೊಮಾ ಇನ್ ಪ್ರಿವೆಂಟಿವ್ ಕನ್ಸರ್ವೇಶನ್
ಬೌದ್ಧ ಅಧ್ಯಯನದಲ್ಲಿ ಪಿಜಿ ಡಿಪ್ಲೊಮಾ
ಡಿಜಿಟಲ್ ಲೈಬ್ರರಿ ಮತ್ತು ಡಾಟಾ ಮ್ಯಾನೇಜ್ಮೆಂಟ್ನಲ್ಲಿ ಪಿಜಿ ಡಿಪ್ಲೊಮಾ
ಪಿ.ಜಿ. ಡಿಪ್ಲೊಮಾ ಇನ್ ಮ್ಯಾನುಸ್ಕ್ರಿಪ್ಟೊಜಿ ಮತ್ತು ಪ್ಯಾಲೇಯೋಗ್ರಫಿ
ಈ ಮೇಲಿನ ಕೋರ್ಸುಗಳನ್ನು IGNCA ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.