ನವದೆಹಲಿ: ಜಾರ್ಜಿಯಾದಲ್ಲಿ ನಡೆದ ತ್ಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್ನ 65 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ಇವರು ಇರಾನ್ ಆಟಗಾರ ಮೆಹ್ರನ್ ನಾಸಿರಿಯನ್ನು ಮಣಿಸಿ ವಿಜಯಿಯಾದರು.
2018ರ ಕಾಮನ್ವೆಲ್ತ್ ಬಂಗಾರ ವಿಜೇತರಾಗಿರುವ ಪೂನಿಯಾ, ಮೆಹ್ರನ್ ಅವರನ್ನು 9-3 ಅಂಕಗಳಿಂದ ಮಣಿಸಿದರು. 2017ರ ಏಷ್ಯನ್ ಚಾಂಪಿಯನ್ಶಿಪ್ನಲ್ಲೂ ಇದೇ ಆಟಗಾರನನ್ನು ಪೂನಿಯಾ ಸೋಲಿಸಿದ್ದರು.
ಮುಂಬರುವ ಏಷ್ಯನ್ ಗೇಮ್ಸ್ನಲ್ಲೂ ಪೂನಿಯಾ ಭರವಸೆಯ ಆಟಗಾರನಾಗಿದ್ದು, 65 ಕೆಜಿ ವಿಭಾಗದಲ್ಲಿ ಭಾರತವನ್ನು ಅವರು ಪ್ರತಿನಿಧಿಸಲಿದ್ದಾರೆ. ಇಂಡೋನೆಷ್ಯಾದಲ್ಲಿ ಏಷ್ಯನ್ ಗೇಮ್ಸ್ ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.