ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟವನ್ನು ಹೆಚ್ಚಿಸಲು ಐಆರ್ಸಿಟಿಸಿ ( Indian Railway Catering and Tourism Corporation) ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬೇಸ್ ಕಿಚನ್ಗಳಲ್ಲಿ ಅಡುಗೆ ಸಿದ್ಧವಾಗುತ್ತಿರುವ ದೃಶ್ಯವನ್ನು ಲೈವ್ ಸ್ಟ್ರೀಮ್ ಮಾಡುವುದು ಕೂಡ ಇದರಲ್ಲೊಂದು.
ಅಡುಗೆ ಸಿದ್ಧಗೊಳ್ಳುವುದನ್ನು ಪ್ರಯಾಣಿಕರು ನೇರವಾಗಿ ವೀಕ್ಷಣೆ ಮಾಡಲಿ ಎಂಬ ಉದ್ದೇಶದೊಂದಿಗೆ ಐಆರ್ಸಿಟಿಸಿ ಅಡುಗೆಯ ದೃಶ್ಯಗಳನ್ನು ಲೈಮ್ ಸ್ಟ್ರೀಮ್ ಮಾಡಲು ನಿರ್ಧರಿಸಿದೆ. ಇದರಿಂದಾಗಿ ರೈಲ್ವೇ ವಿವಿಧ ಬೆಸ್ ಕಿಚನ್ಗಳಲ್ಲಿ ಸಿದ್ಧವಾಗಿ ತಮಗೆ ಪೂರೈಕೆಯಾಗುವ ಆಹಾರ ಎಷ್ಟು ಶುದ್ಧವಾಗಿದೆ, ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯಾಣಿಕರಿಗೆ ಸಾಧ್ಯವಾಗುತ್ತದೆ.
ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ಗೆ ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವನಿ ಲೊಹಾನಿಯಾ ಅವರು ಬುಧವಾರ ಚಾಲನೆ ನೀಡಿದರು.
ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ರೈಲ್ವೇ ಮೇಲಿನ ಪ್ರಯಾಣಿಕರ ನಂಬಿಕೆಯನ್ನು ಹೆಚ್ಚಿಸಲು ಈ ಕ್ರಮ ಸಹಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.