ನವದೆಹಲಿ: ಒಂದು ರಿಂಗ್ನಲ್ಲಿ ಅತೀಹೆಚ್ಚು ವಜ್ರಗಳನ್ನು ಹೊಂದುವ ಮೂಲಕ ಭಾರತದ ಎರಡು ಆಭರಣಗಳು ಗಿನ್ನಿಸ್ ದಾಖಲೆ ನಿರ್ಮಿಸಿದೆ.
ಕಮಲದ ರಚನೆಯ 18 ಕ್ಯಾರೆಟ್ ಬಂಗಾರದ ಉಂಗುರದಲ್ಲಿ 6,690 ವಜ್ರದ ಹರಳುಗಳನ್ನು ಕೂರಿಸಲಾಗಿದೆ. ಗುಜರಾತ್ ಮೂಲದ ವಿಶಾಲ್ ಅಗರ್ವಾಲ್ ಮತ್ತು ಕುಶ್ಬು ಅಗರ್ವಾಲ್ ಇದನ್ನು ವಿನ್ಯಾಸಗೊಳಿಸಿದ್ದಾರೆ. ಬೇಸ್ ಕಾಂಪೊನೆಂಟ್ ಮತ್ತು 48 ಪ್ರತ್ಯೇಕ ಡೈಮಂಡ್ ಎನ್ಕ್ರಸ್ಟೆಡ್ ಪೆಟಲ್ಸ್ ಬಳಸಿ ಇದನ್ನು ರಚಿಸಲಾಗಿದೆ.
ಈ ರಿಂಗ್ನ ಒಟ್ಟು ತೂಕ 58 ಗ್ರಾಮ್ ಆಗಿದೆ. ಇದನ್ನು ವಿನ್ಯಾಸಪಡಿಸಲು ಆರು ತಿಂಗಳುಗಳನ್ನು ತೆಗೆದುಕೊಳ್ಳಲಾಗಿದೆ. ಇದರ ಮೌಲ್ಯ 41,16,787 ಯುಎಸ್ಡಿ ಡಾಲರ್.
ಭಾರತದ ರಾಷ್ಟ್ರೀಯ ಹೂವು ಮತ್ತು ಇದು ನೀರಿನ ಏರಿಕೆಯ ಸಂಕೇತ ಎಂಬ ಕಾರಣಕ್ಕೆ ತಾವರೆಯ ಆಕಾರದಲ್ಲಿ ಈ ರಿಂಗ್ನ್ನು ವಿನ್ಯಾಸಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.