ನವದೆಹಲಿ: ಭಾರತ ಜಗತ್ತಿನ 7ನೇ ಅತೀದೊಡ್ಡ ರಾಷ್ಟ್ರ. ಇಲ್ಲಿನ ಸಂಸ್ಕೃತಿ, ಭಾಷೆಗಳೆಲ್ಲವೂ ವೈವಿಧ್ಯತೆಯಿಂದ ಕೂಡಿದೆ. ವಿವಿಧ ಧರ್ಮ, ಜಾತಿ, ಜನಾಂಗಗಳಿಗೆ ಸೇರಿದ ಜನ ಭಿನ್ನ ಭಿನ್ನ ಭಾಷೆಯಲ್ಲಿ ಸಂವಾದಿಸುತ್ತಾರೆ. ಸಮೀಕ್ಷೆಯೊಂದರ ಪ್ರಕಾರ 1.2 ಬಿಲಿಯನ್ ಜನರಿರುವ ಭಾರತದಲ್ಲಿ ಹಿಂದಿಯನ್ನು ಹೆಚ್ಚಿನ ಜನರು ಮಾತನಾಡುತ್ತಾರೆ. ನಂತರದ ಸ್ಥಾನದಲ್ಲಿ ಇಂಗ್ಲೀಷ್, ಬಳಿಕ ಬಂಗಾಳಿ ಇದೆ.
ಹಿಂದಿ ಭಾರತದಲ್ಲಿ ಅತೀಹೆಚ್ಚು ಬಳಸಲ್ಪಡುವ ಭಾಷೆಯಾಗಿದೆ. ಸುಮಾರು 551 ಮಿಲಿಯನ್ ಹಿಂದಿ ಭಾಷಿಕರು ದೇಶದಲ್ಲಿದ್ದಾರೆ. ಬಳಿಕದ ಸ್ಥಾನದಲ್ಲಿ ಇಂಗ್ಲೀಷ್ ಇದ್ದು, ಇದನ್ನು ಸುಮಾರು 125 ಮಿಲಿಯನ್ ಜನ ಮಾತನಾಡುತ್ತಾರೆ. ಬಂಗಾಳಿಯನ್ನು ಸುಮಾರು 91 ಮಿಲಿಯನ್ ಜನ ಮಾತನಾಡುತ್ತಾರೆ.
ನಾಲ್ಕನೇ ಸ್ಥಾನದಲ್ಲಿ ತೆಲುಗು ಇದ್ದು, ಇದನ್ನು ಸುಮಾರು 84 ಮಿಲಿಯನ್ ಜನ ಮಾತನಾಡುತ್ತಾರೆ. 5ನೇ ಸ್ಥಾನದಲ್ಲಿ ಮರಾಠಿ ಇದ್ದು, ಇದನ್ನು ಸುಮಾರು ಮಿಲಿಯನ್ 84 ಮಿಲಿಯನ್ ಜನ ಬಳಸುತ್ತಾರೆ. 6ನೇ ಸ್ಥಾನದಲ್ಲಿ ತಮಿಳು ಇದ್ದು, ಇದನ್ನು ಸುಮಾರು 67 ಮಿಲಿಯನ್ ಜನ ಬಳಸುತ್ತಾರೆ. 7ನೇ ಸ್ಥಾನದಲ್ಲಿ ಉರ್ದು ಇದ್ದು, ಇದನ್ನು ಸುಮಾರು 59 ಮಿಲಿಯನ್ ಜನ ಬಳಸುತ್ತಾರೆ.
8ನೇ ಸ್ಥಾನದಲ್ಲಿ ಕನ್ನಡ ಇದ್ದು, ಇದನ್ನು ಸುಮಾರು 51 ಮಿಲಿಯನ್ ಜನ ಬಳಸುತ್ತಾರೆ. 9ನೇ ಸ್ಥಾನದಲ್ಲಿ ಗುಜರಾತ್ ಇದ್ದು, ಇದನ್ನು ಸುಮಾರು 50 ಮಿಲಿಯನ್ ಜನ ಬಳಸುತ್ತಾರೆ. 10ನೇ ಸ್ಥಾನದಲ್ಲಿ ಒಡಿಸ್ಸಿ ಇದ್ದು, ಇದನ್ನು ಸುಮಾರು 37 ಮಿಲಿಯನ್ ಜನ ಬಳಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.