ನವದೆಹಲಿ: ಇಸ್ರೇಲ್ನೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಭಾರತ, ಆ ದೇಶದಿಂದ ಸುಮಾರು 4,500 ಸ್ಪೈಕ್ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ನ್ನು ಖರೀದಿ ಮಾಡಲು ಮುಂದಾಗಿದೆ. ಈ ಬಗೆಗಿನ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ.
ಸುಮಾರು 500 ಮಿಲಿಯನ್ ಡಾಲರ್ ಒಪ್ಪಂದ ಇದಾಗಿದ್ದು, ಇಸ್ರೇಲ್ ರಕ್ಷಣಾ ಕಾರ್ಯದರ್ಶಿ ಯುಡಿ ಆಡಂ ಭಾರತಕ್ಕೆ ಆಗಮಿಸುವ ವೇಳೆ ಈ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ.
ಆಡಂ ಅವರು ಜುಲೈ 2ಕ್ಕೆ ನವದೆಹಲಿಗೆ ಆಗಮಿಸಲಿದ್ದು, ಭಾರತದ ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಅವರೊಂದಿಗೆ ಸಬೆ ನಡೆಸಲಿದ್ದಾರೆ. ರಕ್ಷಣಾ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಭೇಟಿಯಾಗಲಿದ್ದಾರೆ.
ಸ್ಪೈಕ್ ಮಿಸೈಲ್ಗಳು 800 ಮೀಟರ್ನಿಂದ 8 ಕಿಲೋಮೀಟರ್ವರೆಗೆ ರೇಂಜ್ ಹೊಂದಿದ್ದು, ಇದರ ಖರೀದಿಗೆ ಭಾರತೀಯ ಸೇನೆ ಭಾರೀ ಉತ್ಸಾಹ ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.