ಜಮ್ಮು: ಇನ್ನು ಎರಡನೇ ದಿನಗಳಲ್ಲಿ ಪ್ರಸಿದ್ಧ ಅಮರನಾಥ ಯಾತ್ರೆ ಆರಂಭಗೊಳ್ಳಲಿದೆ. ಉಗ್ರರ ಬೆದರಿಕೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇನ್ನಿಲ್ಲದ ರೀತಿಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೂಲಗಳ ಪ್ರಕಾರ ಈ ಬಾರಿ ಮೋಟಾರ್ ಬೈಕ್ ಸ್ಕ್ವಾಡ್ನ್ನು ಯಾತ್ರೆಯ ಮೇಲೆ ಕಣ್ಗಾವಲು ಇಡುವುದಕ್ಕಾಗಿ ರಚಿಸಲಾಗಿದೆ.
ಸಿಆರ್ಪಿಎಫ್ ವಿಶೇಷ ಮೋಟಾರ್ಸೈಕಲ್ ಸ್ಕ್ವಾಡ್ನ್ನು ರಚನೆ ಮಾಡಿದ್ದು, ಇದರ ಮುಖೇನ ಅಮರನಾಥ ಯಾತ್ರೆಗೆ ಫುಲ್ಪ್ರೂಫ್ ಸೆಕ್ಯೂರಿಟಿಯನ್ನು ಒದಗಿಸಲಿದೆ. ಒಂದು ಕಡೆ ಯಾತ್ರೆಯುದ್ದಕ್ಕೂ ಈ ಪಡೆ ಯಾತ್ರಿಕರಿಗೆ ರಕ್ಷಣೆಯನ್ನು ನೀಡಲಿದೆ. ಮತ್ತೊಂದೆಡೆ ಸಣ್ಣ ಅಂಬುಲೆನ್ಸ್ಗಳನ್ನು ಯಾತ್ರಿಕರಿಗೆ ಒದಗಿಸುವ ಕಾರ್ಯ ಮಾಡಲಿದೆ.
ಯಾತ್ರಿಕರನ್ನು ಹೊತ್ತೊಯ್ಯವ ಪ್ರತಿ ವಾಹನಗಳಲ್ಲೂ ರೇಡಿಯೋ ಫ್ರಿಕ್ವೆನ್ಸಿ ಟ್ಯಾಗ್ನ್ನು ಅಳವಡಿಸಲಾಗುತ್ತಿದೆ. ಇದರಿಂದ ವಾಹನದ ಪ್ರಯಾಣದ ಸಂಪೂರ್ಣ ಮಾಹಿತಿ ಭದ್ರತಾ ಪಡೆಗಳಿಗೆ ರವಾನೆಯಾಗುತ್ತದೆ.
60 ದಿನಗಳ ಯಾತ್ರೆ ಜೂನ್ 28ರಿಂದ ಆರಂಭಗೊಳ್ಳಲಿದೆ. ಉಗ್ರರ ಬೆದರಿಕೆಯನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯ ಯಾತ್ರಿಕರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.