ನವದೆಹಲಿ: ಪ್ರಪಂಚದ ಗಣ್ಯ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ರಚಿಸುವ ಮೂಲಕ ಭಾರೀ ಖ್ಯಾತಿ ಗಳಿಸಿರುವ ಲಂಡನ್ನ ಮೇಡಮ್ ಟುಸ್ಸಾಡ್ಸ್, ಶೀಘ್ರದಲ್ಲೇ ಖ್ಯಾತ ಯೋಗ ಗುರು ಬಾಬಾ ರಾಮ್ದೇವ್ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಿದೆ.
ಕಳೆದ 250 ವರ್ಷಗಳಿಂದ ಮೇಡಮ್ ಟುಸ್ಸಾಡ್ಸ್ ಜಗತ್ತಿನ ಗಣ್ಯರ ಮೇಣದ ಪ್ರತಿಮೆಯನ್ನು ನಿರ್ಮಿಸಿ ಜನರನ್ನು ಆಕರ್ಷಿಸುತ್ತಿದೆ. ಈಗಾಗಲೇ ವಿರಾಟ್ ಕೊಹ್ಲಿ, ಅಮಿತಾಭ್ ಬಚ್ಚನ್, ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್ರಂತಹ ದಿಗ್ಗಜರ ಪ್ರತಿಮೆಗಳನ್ನು ಇದು ರಚಿಸಿದೆ. ರಾಮ್ದೇವ್ ಬಾಬಾ ಅವರು ಇದಕ್ಕೆ ಹೊಸದಾಗಿ ಸೇರ್ಪಡೆಗೊಳ್ಳಲಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯೇ ಈ ಬಗ್ಗೆ ರಾಮ್ದೇವ್ ಅವರಿಗೆ ಟುಸ್ಸಾಡ್ಸ್ ಮಾಹಿತಿಯನ್ನು ನೀಡಿತ್ತು. ಇನ್ನು ಕೆಲವೇ ದಿನಗಳಲ್ಲಿ ಮೂರ್ತಿ ಸಿದ್ಧವಾಗಲಿದ್ದು, ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ರಾರಾಜಿಸಲಿದೆ.
ಈ ಪ್ರತಿಮೆಯೊಂದಿಗೆ ಯೋಗ, ಆಧ್ಯಾತ್ಮಗಳೂ ಪ್ರಚಾರವಾಗಬೇಕು ಎಂಬ ಇಂಗಿತವನ್ನು ರಾಮ್ದೇವ್ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.