ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ತಮ್ಮ ಫೇಸ್ಬುಕ್ನಲ್ಲಿ ’ಮಾನವ ಹಕ್ಕುಗಳಿಗೆ ಯಾರು ಬೆದರಿಯೊಡ್ಡುತ್ತಿದ್ದಾರೆ?’ ಎಂಬ ಬಗ್ಗೆ ಅರ್ಥಗರ್ಭಿತ, ವಾಸ್ತವಾಂಶಗಳನ್ನು ಒಳಗೊಂಡ ಸೊಗಸಾದ ಲೇಖನವನ್ನು ಬರೆದಿದ್ದಾರೆ. ಇದರ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಬೊಬ್ಬೆ ಹೊಡೆಯುತ್ತಿರುವವರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಮೂಲಭೂತ ಹಕ್ಕುಗಳು ಭಾರತ ಸಂವಿಧಾನದ ಮೂಲ ರಚನೆಯಲ್ಲೇ ಇದೆ ಎಂದು ಪ್ರತಿಪಾದಿಸಿರುವ ಅವರು, ಮಾನವನ ಮೂಲ ಹಕ್ಕುಗಳನ್ನು ಎಂದಿಗೂ ತಿದ್ದುಪಡಿ ಮಾಡಲು ಅಥವಾ ಬದಲಾವಣೆ ಮಾಡಲು ಸಾಧ್ಯವಿಲ್ಲ. ನೈಸರ್ಗಿಕ ಹಕ್ಕುಗಳು ಪ್ರತಿ ಜೀವಿಗೂ ಸಂಬಂಧಿಸಿದ್ದಾಗಿ ಎಂದಿದ್ದಾರೆ.
ಭಾರತದಲ್ಲಿ ಮಾನವ ಹಕ್ಕುಗಳಿಗೆ ಬೆದರಿಕೆಯಾಗಿರುವುದು ಜಿಹಾದಿಗಳು, ಪ್ರತ್ಯೇಕತಾವಾದಿಗಳು, ಮಾವೋವಾದಿ ಬಂಡುಕೋರರು. ನಮ್ಮ ಪಶ್ಚಿಮದ ನೆರೆ ರಾಷ್ಟ್ರಗಳು ಹಣ ಪೂರೈಸಿ ಇವುಗಳನ್ನು ಪೋಷಣೆ ಮಾಡುತ್ತಿವೆ. ಭಾರತವನ್ನು ಅಸ್ಥಿರಗೊಳಿಸುವುದೇ ಇವುಗಳ ಬಹುಮುಖ್ಯ ಗುರಿಯಾಗಿದೆ. ಇವರು ದೇಶದ ಕೆಲವು ಭಾಗಗಳಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆದರೆ ಜಮ್ಮು ಕಾಶ್ಮೀರದಲ್ಲಿ ಜಿಹಾದಿಗಳತ್ತ ಯುವಕರು ಆಕರ್ಷಿತರಾಗುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ.
ಮಾವೋವಾದಿ ಬಂಡುಕೋರರು ಮಧ್ಯಭಾರತದ ಬುಡಕಟ್ಟು ಪ್ರದೇಶದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಅವರ ನೈತಿಕ ಬೆಂಬಲಿಗರು ದೇಶದಾದ್ಯಂತ ಹರಡಿಕೊಂಡಿದ್ದಾರೆ. ಇವರು ಚುನಾಯಿತ ಸರ್ಕಾರವನ್ನು ಕಿತ್ತೊಗೆಯುವ ಪ್ರಯತ್ನವನ್ನು ನಿರಂತರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆ ಇಲ್ಲ. ರಾಜಕೀಯ ಬದಲಾವಣೆಯನ್ನು ಉತ್ತೇಜಿಸಲು ಹಿಂಸೆಯನ್ನು ಬಳಸುತ್ತಾರೆ. ಗನ್ನಿಂದಲೇ ಅಧಿಕಾರ ಬರುತ್ತದೆ ಎಂಬ ನಂಬಿಕೆ ಇವರದ್ದು ಎಂದಿದ್ದಾರೆ.
‘ನಮ್ಮ ಸರ್ಕಾರ ಪ್ರತಿಯೊಬ್ಬ ಭಾರತೀಯ ಮಾನವ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ನಮ್ಮ ಮುಖ್ಯ ಧ್ಯೇಯವೇ ಅದು. ಅದು ಕಾಶ್ಮೀರವೇ ಇರಲಿ, ಬುಡಕಟ್ಟು ಪ್ರದೇಶವೇ ಇರಲಿ’ ಎಂದಿದ್ದಾರೆ.
ಬ್ಲಾಗ್ನ ಸಂಪೂರ್ಣ ವಿವರಗಳನ್ನು ಈ ಲಿಂಕ್ನಲ್ಲಿ ಓದಬಹುದು. : https://www.facebook.com/notes/arun-jaitley/who-is-threatening-human-rights/805931829595367/
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.