ಅಹ್ಮದಾಬಾದ್: ದೇಶದಾದ್ಯಂತದಿಂದ ಬಂದ ಸುಮಾರು 800 ವಿಕಲಚೇತನರು ಅಹ್ಮದಾಬಾದ್ನಲ್ಲಿ ಗುರುವಾರ ಯೋಗದ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಮಾಡಿದರು.
‘ಅತೀದೊಡ್ಡ ಮೌನ ಯೋಗ ಕ್ಲಾಸ್’ ಎಂಬ ಗಿನ್ನಿಸ್ ದಾಖಲೆ ನಿರ್ಮಾಣವಾಗಿದೆ, ಮೇ ತಿಂಗಳಿನಿಂದ ಇವರು ಶಿವಾನಂದ್ ಆಶ್ರಮದ ಯೋಗ ಗುರುಗಳಿಂದ ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ.
ದೇಶದ ಸುಮಾರು 10 ನಗರಗಳಿಂದ ಬಂದ ವಿಕಲಚೇತನರು ಇದರಲ್ಲಿ ಭಾಗಿಯಾದರು. ಬ್ಲೈಂಡ್ ಪೀಪಲ್ಸ್ ಅಸೋಸಿಯೇಶನ್, ಅಪಂಗ್ ಮಾನವ್ ಮಂಡಲ್, ಅಂಧ್ ಕನ್ಯಾ ಪ್ರಕಾಶ್ ಗೃಹ್ ಮುಂತಾದ ಸಂಘಟನೆಗಳಿಗೆ ಇವರು ಸೇರಿದವರಾಗಿದ್ದಾರೆ.
ಬ್ಲೂಟೂತ್ಗೆ ಸಂಪರ್ಕಿತಗೊಂಡ ಹೆಡ್ಫೋನ್ ಮೂಲಕ ಇವರಿಗೆ ಯೋಗ ಸೂಚನೆಗಳನ್ನು ನೀಡಲಾಗಿದೆ. ಕೆಲವರು ವೇದಿಕೆಯಲ್ಲಿ ಭಂಗಿಯನ್ನು ನೋಡಿ ಅನುಸರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.