ನವದೆಹಲಿ: ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಅತ್ಯದ್ಭುತವಾದ ಮರಳು ಕಲಾಕೃತಿಯನ್ನು ರಚಿಸುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. ಅಲ್ಲದೇ ತಮ್ಮ ಕಲಾಕೃತಿ ಮೂಲಕ ವಿಶ್ವಕ್ಕೆ ಅತ್ಯುತ್ತಮ ಸಂದೇಶವೊಂದನ್ನು ರವಾನಿಸಿದ್ದಾರೆ.
ಒರಿಸ್ಸಾ ಬೀಚ್ನಲ್ಲಿ ಮೂಡಿ ಬಂದ 20 ಅಡಿ ಎತ್ತರದ ಕಲಾಕೃತಿ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್, ಚೀನಾ, ರಷ್ಯಾ ಅಧ್ಯಕ್ಷರುಗಳನ್ನು ಅವರವರ ರಾಷ್ಟ್ರ ಧ್ವಜಗಳೊಂದಿಗೆ ಬಿಡಿಸಲಾಗಿದೆ. ‘ಶಾಂತಿ ಮತ್ತು ಸೌಹಾರ್ದತೆಗಾಗಿ ಯೋಗ’ ಎಂಬ ಸಂದೇಶ ಬರೆಯಲಾಗಿದೆ. 5 ಟನ್ಗಳಷ್ಟು ಮರಳು ಬಳಸಿ ಇದನ್ನು ರಚಿಸಲಾಗಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಪಟ್ನಾಯಕ್, ‘ವಿಶ್ವದ ಶಾಂತಿಗಾಗಿ ಯೋಗದ ಮುಖೇನ ವಿಶ್ವ ನಾಯಕರು ಒಂದಾಗಬೇಕು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.