ಹೈದರಾಬಾದ್: ಬಹುತೇಕ ಭಾರತೀಯರು ಈಗಲೂ ಎರಡು ಹೊತ್ತಿನ ಊಟಕ್ಕೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ ಹೈದರಾಬಾದ್ನ ಸೇವಾ ಭಾರತಿ ಟ್ರಸ್ಟ್. ಸೂರು ಕಲ್ಪಿಸುವುದು ಮಾತ್ರವಲ್ಲದೇ ದಿನಕ್ಕೆ ಎರಡು ಹೊತ್ತಿನ ಊಟವನ್ನು ಇದು ಕೇವಲ ರೂ.10ಕ್ಕೆ ನೀಡುತ್ತಿದೆ.
ಸಮೀಪ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳನ್ನು ನೋಡಿಕೊಳ್ಳಲು ಬರುವ ಕುಟುಂಬ ಸದಸ್ಯರಿಗೆ ಊಟ ಮತ್ತು ವಸತಿ ಒಂದು ದೊಡ್ಡ ತಲೆನೋವಾಗುತ್ತದೆ. ಹಣಕೊಟ್ಟು ಊಟ ಮಾಡುವಷ್ಟು ಹಣ ಇವರ ಬಳಿ ಇರುವುದಿಲ್ಲ. ಇವರಿಗೆ ಸಹಾಯಕವಾಗಲಿ ಎಂಬ ಕಾರಣಕ್ಕೆಯೇ ಸೇವಾ ಭಾರತಿ ದಿನಕ್ಕೆ ಎರಡು ಹೊತ್ತಿನ ಊಟವನ್ನು ರೂ.10ಕ್ಕೆ ಒದಗಿಸುತ್ತಿದೆ.
‘2013ರಲ್ಲಿ ಈ ಟ್ರಸ್ಟ್ ಸ್ಥಾಪನೆಯಾಯಿತು, ಸ್ಥಳಿಯ ಗಾಂಧೀ ಆಸ್ಪತ್ರೆಯವರು ನಮಗೆ ಬರುವ ರೋಗಿಗಳ ಆರೈಕೆದಾರರಿಗೆ ವಸತಿ ನಿರ್ಮಿಸುವಂತೆ ಕೋರಿದರು, ಮೂರು ತಿಂಗಳೊಳಗೆ ವಸತಿ ನಿರ್ಮಿಸಿದೆವು. ಮೊದಲು 10 ಜನ ಇಲ್ಲಿಗೆ ಬರುತ್ತಿದ್ದರು. ಈಗ 250ಕ್ಕೂ ಅಧಿಕ ಜನ ದಿನನಿತ್ಯ ಬರುತ್ತಾರೆ. ವಸತಿಗೆ ಪ್ರತ್ಯೇಕ ಶುಲ್ಕ ತೆಗೆದುಕೊಳ್ಳುತ್ತಿಲ್ಲ’ ಎಂದು ಟ್ರಸ್ಟ್ ಕಾರ್ಯದರ್ಶಿ ನರಸಿಂಹ ಮೂರ್ತಿ ಹೇಳುತ್ತಾರೆ.
ದೂರದಿಂದ ಬರುವವರು ಇಲ್ಲಿ ಬ್ರೇಕ್ ಫಾಸ್ಟ್ ಸೇರಿದಂತೆ ಊಟವನ್ನು ಮಾಡಬಹುದು, ಸ್ನಾನವನ್ನೂ ಮಾಡಬಹುದು. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಆಶಾಕಿರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.