ನವದೆಹಲಿ: ಜೂನ್ 14ನ್ನು ವಿಶ್ವ ಆರೋಗ್ಯ ಸಂಸ್ಥೆ ರಕ್ತದಾನಿಗಳ ದಿನವನ್ನಾಗಿ ಘೋಷಿಸಿದೆ. ವಿಶ್ವದಾದ್ಯಂತ ಸ್ವಯಪ್ರೇರಣೆಯಿಂದ ರಕ್ತದಾನ ಮಾಡಿ ಇತರರ ಜೀವ ಉಳಿಸುತ್ತಿರುವ ನಿಸ್ವಾರ್ಥ ಸೇವಕರನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತದೆ.
ರಕ್ತದಾನದ ಮಹತ್ವದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು, ಆ ಮೂಲಕ ಹೆಚ್ಚು ಹೆಚ್ಚು ಜನರನ್ನು ರಕ್ತದಾನ ಮಾಡುವಂತೆ ಉತ್ತೇಜಿಸುವುದು ಕೂಡ ಈ ದಿನದ ಪ್ರಮುಖ ಉದ್ದೇಶವಾಗಿದೆ.
ದೇಶದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ, ಆದರೆ ಪೂರೈಕೆ ತೀರಾ ಕಡಿಮೆಯಿದೆ. ಆದರೂ ಸೇವಾ ಸಂಘಟನೆಗಳ ರಕ್ತದಾನ ಶಿಬಿರ, ರಕ್ತದಾನದ ಬಗೆಗಿನ ಜಾಗೃತಿಗಳಿಂದಾಗಿ ರಕ್ತದಾನಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ರಕ್ತದಾನ ನೀಡಿ ಇನ್ನೊಬ್ಬರ ಜೀವ ಉಳಿಸುವ ಮಹತ್ತರವಾದ ಕಾರ್ಯವನ್ನು ಪ್ರತಿ ಆರೋಗ್ಯವಂತನೂ ಮಾಡಬೇಕಿದೆ. ಇದರಿಂದ ದೇಶದಲ್ಲಿನ ರಕ್ತದ ಪೂರೈಕೆಯ ಕೊರತೆ ನೀಗುತ್ತದೆ. ಹಲವರ ಜೀವ ಉಳಿಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.