×
Home About Us Advertise With s Contact Us

ಶಾರದಾ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ತರಗತಿಗಳಿಗೆ ಪ್ರವೇಶ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮೊಲ್ಲಾಸದಿಂದ ಆಯೋಜಿಸಲಾಯಿತು. ಮೊದಲಿಗೆ ವಿದ್ಯಾ ಸಂಸ್ಥೆಯ ಧ್ಯಾನಮಂದಿರ ಸಭಾಂಗಣದಲ್ಲಿ ಗಣಹೋಮ ಸರಸ್ವತಿ ಪೂಜೆ ನೆರವೇರಿತು. ಬಳಿಕ ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಹಾಗೂ ಅಕ್ಷರಾಭ್ಯಾಸ ನಡೆಯಿತು. ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್ ಈ ಸಂದರ್ಭ ಹೆತ್ತವರನ್ನು ಹಾಗೂ ಶಿಕ್ಷಕರನ್ನು ಉದ್ಧೇಶಿಸಿ ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣದ ಅಡಿಪಾಯ ಹಾಕಿದರೆ ಮುಂದೆ ಅವರು ಪೂರ್ಣ ಚಂದ್ರನಂತೆ ಬೆಳಗುವ ಜೀವನವನ್ನು ನಡೆಸುವರು. ಶಾರದಾ ವಿದ್ಯಾ ಸಂಸ್ಥೆಯಲ್ಲಿ ಕಲಿತ ಮಕ್ಕಳು ಶೈಕ್ಷಣಿಕ ಸಾಧನೆಯ ಜತೆಗೆ ಉತ್ತಮ ನೈತಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಕಾರಣ ಎಲ್ಲಾ ಕಡೆ ಗುರುತಿಸಲ್ಪಡುತ್ತಾರೆ. ಇಂತಹ ವಿದ್ಯಾರ್ಥಿಗಳ ಹೆತ್ತವರಿಗೂ, ವಿದ್ಯಾ ಸಂಸ್ಥೆಗೂ ಕೀರ್ತಿ ತರುತ್ತಾರೆ ಎಂಬುದು ಅಭಿಮಾನಪಡುವ ವಿಷಯ ಎಂಬುದಾಗಿ ಅವರು ಅಭಿಪ್ರಾಯವಿತ್ತರು ಹಾಗೂ ಶುಭ ಹಾರೈಸಿದರು.

ವಿದ್ಯಾಲಯದ ಸಂಗೀತ ಶಿಕ್ಷಕಿ ಶ್ರೀಮತಿ ರಜನಿ ಶೆಣೈ ಪ್ರಾರ್ಥನೆ ಹಾಡಿದರು. ಶಿಕ್ಷಕಿ ಶ್ರೀಮತಿ ಉಜ್ವಲಮಂಗಳಾ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ ವಂದನಾರ್ಪಣೆಗೈದು ಪುಟಾಣಿಗಳಿಗೆ ಶುಭ ಹಾರೈಸಿದರು. ಉಪ-ಪ್ರಾಂಶುಪಾಲ ಶ್ರೀ ದಯಾನಂದ್ ಕಟೀಲ್ ಕಾರ್ಯಕ್ರಮ ನಿರ್ವಹಣೆಗೈದರು. ಸಂಸ್ಕೃತ ಶಿಕ್ಷಕ ಶ್ರೀ ನಾಗರಾಜ್ ಭಟ್ ಪೂಜಾ ಕಾರ್ಯ ನಡೆಸಿಕೊಟ್ಟರು ಮತ್ತು ಶ್ರೀ ಶ್ರೀಪತಿ ಭಟ್ ಅಕ್ಷರಾಭ್ಯಾಸಕ್ಕೆ ಮಾರ್ಗದರ್ಶನವಿತ್ತರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಪ್ರಸಾದ ವಿತರಣೆಗೈಯ್ಯಲಾಯಿತು. ವಿದ್ಯಾಲಯದ ಶಿಕ್ಷಕರು ಹಾಗೂ ಸಿಬ್ಬಂದಿ ಸಹಕರಿಸಿದರು.

 

Recent News

Back To Top
error: Content is protected !!