ನವದೆಹಲಿ: 1 ಮತ್ತು 2ನೇ ತರಗತಿಯ ಎಳೆಯ ಮಕ್ಕಳಿಗೆ ಶಿಕ್ಷಣ ಹೊರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಅವರ ಸಿಲೆಬಸ್ನ್ನು ಅರ್ಧದಷ್ಟು ಕಡಿತಗೊಳಿಸಲು ಮತ್ತು ಹೋಂವರ್ಕ್ ನೀಡದಿರಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, 1 ಮತ್ತು ನೇ ತರಗತಿ ಮಕ್ಕಳ ಸಿಲೆಬಸ್ ಕಡಿತಗೊಳ್ಳಲಿದೆ ಮತ್ತು ಹೋಂವರ್ಕ್ ರದ್ದುಗೊಳ್ಳಲಿದೆ. ಇದರಿಂದ ಅವರಿಗೆ ಶಿಕ್ಷಣ ಹೊರೆ ಎನಿಸುವುದಿಲ್ಲ ಎಂದಿದ್ದಾರೆ.
ಅಲ್ಲದೇ 2019ರಿಂದ 5ನೇ ಮತ್ತು 8ನೇ ತರಗತಿಗೆ ಪಾಸ್/ಫೇಲ್ ಪದ್ಧತಿ ಆರಂಭಗೊಳ್ಳಲಿದೆ. ಫೇಲ್ ಆದವರಿಗೆ ಎರಡು ಬಾರಿ ಪರೀಕ್ಷೆ ಬರೆದು ಪಾಸಾಗಲು ಅವಕಾಶ ದೊರೆಯಲಿದೆ ಎಂದರು.
ದೈಹಿಕ ಶಿಕ್ಷಣ ಮತ್ತು ಅನುಭವದ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.