ನವದೆಹಲಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ’ಮಹಿಳೆಯರ ಅನುಚಿತ ಪ್ರತಿನಿಧಿತ್ವ(ನಿಷೇಧ)ಕಾಯ್ದೆ ( Indecent Representation of Women (Prohibition) Act (IRWA) 1986ಗೆ ತಿದ್ದುಪಡಿಯನ್ನು ತಂದು, ಅದರಲ್ಲಿನ ‘ಜಾಹೀರಾತು’ ಶಬ್ದವನ್ನು ವಿವಿಧ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ವಿಧಾನಗಳಿಗೂ ಅಥವಾ ಎಸ್ಎಂಎಸ್, ಎಂಎಂಎಸ್ಗಳಿಗೂ ವಿಸ್ತರಣೆಗೊಳಿಸಲು ಪ್ರಸ್ತಾವಣೆ ಸಲ್ಲಿಸಿದೆ.
ಜಾಹೀರಾತು, ಪ್ರಕಟನೆ, ಬರವಣಿಗೆ, ಚಿತ್ರಕಲೆ, ಸಂಖ್ಯೆ ಮತ್ತು ಇತರ ಯಾವುದೇ ರೀತಿಯಲ್ಲೂ ಮಹಿಳೆಯನ್ನು ಅನುಚಿತವಾಗಿ ಬಿಂಬಿಸುವುದನ್ನು ಈ ಕಾಯ್ದೆ ನಿಷೇಧಿಸಿದೆ. ಕಾಯ್ದೆ ಜಾರಿಗೆ ಬಂದ ಬಳಿಕ ದೇಶದಲ್ಲಿ ದೊಡ್ಡ ಡಿಜಿಟಲ್, ತಂತ್ರಜ್ಞಾನ ಕ್ರಾಂತಿಯೇ ಆಗಿದೆ. ಡಿಜಿಟಲ್ ಜಾಹೀರಾತುಗಳು, ಹೊಸ ವಿಧಾನದ ಸಂವಹನಗಳು, ಇಂಟರ್ನೆಟ್, ಮಲ್ಟಿಮೀಡಿಯಾ ಮೆಸೇಜಿಂಗ್, ಸಾಮಾಜಿಕ ಜಾಲತಾಣ, ಕೇಬಲ್ ಟೆಲಿವಿಜನ್, ಅಪ್ಲಿಕೇಶನ್ ಎಂಬಿತ್ಯಾದಿ ಹತ್ತು ಹಲವು ವಿಧಾನಗಳು ರೂಪುಗೊಂಡಿವೆ.
ಈ ತಾಂತ್ರಿಕ ಆಧುನಿಕತೆಯನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿಯನ್ನು ತರಲು ನಿರ್ಧರಿಸಲಾಗಿದೆ. ಯಾವುದೇ ಡಿಜಿಟಲ್, ಎಲೆಕ್ಟ್ರಾನಿಕ್ ವಿಧಾನದಲ್ಲಿ ಮಹಿಳೆಯನ್ನು ಅಸಭ್ಯವಾಗಿ ಬಿಂಬಿಸುವುದನ್ನು ಇದು ನಿಷೇಧಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.