ನವದೆಹಲಿ: ಭಾರತ ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುವ 2022ನೇ ಇಸವಿಯ ವೇಳೆಗೆ ಪ್ರತಿ ಭಾರತೀಯನೂ ವಸತಿ ಹೊಂದುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮೋ ಆಪ್ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಸತಿ ವಲಯಕ್ಕೆ ಎನ್ಡಿಎ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. 75ನೇ ಸ್ವಾತಂತ್ರ್ಯ ಆಚರಣೆಯ 2022ರ ವೇಳೆ ಪ್ರತಿಯೊಬ್ಬನೂ ವಸತಿ ಹೊಂದಿರಬೇಕು ಎಂಬುದು ನಮ್ಮ ಗುರಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ’ ಎಂದಿದ್ದಾರೆ.
ಸರ್ಕಾರದ ಹಲವಾರು ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಬಡವರಿಗಾಗಿ ಸಾಕಷ್ಟು ಕಾರ್ಯ ಮಾಡದ ಹಿಂದಿನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
‘ಪ್ರತಿ ಜೀವಿಗೂ ತನ್ನದೇ ಮನೆ ಇರಬೇಕು ಎಂಬ ಆಶಯವಿರುತ್ತದೆ. ಸ್ವಂತ ಮನೆ ಹೊಂದಿದಾಗ ವ್ಯಕ್ತಿಗಳು ಹೆಚ್ಚು ಸಂತುಷ್ಟರಾಗುತ್ತಾರೆ. ಆವಾಸ್ ಯೋಜನೆ ಇಟ್ಟಿಗೆ ಮತ್ತು ಮೋರ್ಟರ್ಗಳ ವಿಷಯವಲ್ಲ. ಅದು ಗುಣಮಟ್ಟದ ಜೀವನ, ಕನಸು ಸಾಕಾರದ ವಿಷಯ’ ಎಂದರು.
ವಸತಿ ವಲಯವನ್ನು ಮಧ್ಯವರ್ತಿಗಳಿಂದ, ಭ್ರಷ್ಟಾಚಾರಿಗಳಿಂದ ಮುಕ್ತಗೊಳಿಸಿ ಬಡವರು ಯಾವುದೇ ಸಂಕಷ್ಟವಿಲ್ಲದೆ ಮನೆ ಪಡೆಯುವಂತೆ ಮಾಡುವುದು ನಮ್ಮ ಗುರಿ, ವಸತಿ ವಲಯವನ್ನು ತಂತ್ರಜ್ಞಾನದೊಂದಿಗೆ ಒಳಪಡಿಸುತ್ತೇವೆ, ಇದರಿಂದಾಗಿ ಗ್ರಾಮ ಮತ್ತು ನಗರಗಳಲ್ಲಿ ಕಡಿಮೆ ದರಕ್ಕೆ ಬಡವರಿಗೆ ವಸತಿ ಸಿಗುವಂತಾಗುತ್ತದೆ, ವಸತಿ ನಿರ್ಮಾಣದ ಕಾರ್ಯವೂ ವೇಗಗೊಳ್ಳುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.