ಮುದ್ರಾ- ಅತೀ ಸಣ್ಣ ಘಟಕಗಳ ಅಭಿವೃದ್ಧಿ ಮತ್ತು ಮರುಹಣಕಾಸು ಸಂಸ್ಥೆ : ಕೇಂದ್ರ ಸರ್ಕಾರ ಏಪ್ರಿಲ್ 8, 2015 ರಲ್ಲಿ ಜಾರಿಗೆ ತಂದ ಮುದ್ರಾ ಯೋಜನೆಯ ಮುಖ್ಯ ಉದ್ದೇಶವೆಂದರೆ, ಕಾರ್ಪೊರೇಟ್ ಮಟ್ಟದ್ದಲ್ಲದ ಸಣ್ಣ ಔದ್ಯಮಿಕ ವಲಯಕ್ಕೆ ಹಣಕಾಸಿನ ಸಹಕಾರ ನೀಡುವುದು. ಇದರಡಿಯಲ್ಲಿ ಸಣ್ಣ ಉದ್ಯಮಗಳು/ಸ್ಟಾರ್ಟ್ ಅಪ್ಗಳು ಅಥವಾ ವಾಣಿಜ್ಯೋದ್ಯಮಿಗಳು ರೂ. 50,000 ದಿಂದ ರೂ.10 ಲಕ್ಷದವರೆಗಿನ ಸಾಲವನ್ನು ಯೋಜನೆಯ ಶಿಶು, ಕಿಶೋರ್ ಮತ್ತು ತರುಣ್ ವಿಭಾಗಗಳಲ್ಲಿ ತಮ್ಮ ವ್ಯಾಪಾರವನ್ನು ಆರಂಭಿಸಲು/ಬೆಳೆಸಲು ಪಡೆದುಕೊಳ್ಳಬಹುದು. ಈ ಯೋಜನೆ ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಪಾತ್ರ ವಹಿಸಿದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ : www.mudra.org.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.