×
Home About Us Advertise With s Contact Us

ಸಿ.ಬಿ.ಎಸ್.ಇ 10 ನೇ ತರಗತಿ ಫಲಿತಾಂಶ – ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳ ಸತತ ಅತ್ಯುತ್ತಮ ಸಾಧನೆ

ಮಂಗಳೂರು: 1992 ರಲ್ಲಿ ನಗರದ ಹೃದಯ ಭಾಗವಾದಂತಹ ಕೊಡಿಯಾಲಬೈಲಿನಲ್ಲಿ ಪ್ರಾರಂಭವಾದ ಶಾರದಾ ವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬೆಳ್ಳಿ ಹಬ್ಬದ ಆಚರಣೆಯನ್ನು ಮುಗಿಸಿ 26 ನೇ ವರ್ಷಕ್ಕೆ ಪಾದರ್ಪಣೆಯ ಈ ವರ್ಷ ಕೇಂದ್ರೀಯ ಪಠ್ಯಕ್ರಮ (ಸಿ.ಬಿ.ಎಸ್.ಇ) ದಡಿ ನಡೆದ ಪರೀಕ್ಷೆಯಲ್ಲಿ ವಿದ್ಯಾಲಯ ಈ ಬಾರಿ ಅತ್ಯುತ್ತಮ ದಾಖಲೆಯ ಫಲಿತಾಂಶವನ್ನು ಸಾಧಿಸಿ ಈ ಮೂಲಕ ಮತ್ತೊಮ್ಮೆ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ತುಳುನಾಡು ಎಜುಕೇಶನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಾರದಾ ವಿದ್ಯಾಲಯದ ಕೇಂದ್ರೀಯ ಮಾಧ್ಯಮಿಕ ಪರೀಕ್ಷೆಗೆ ಹಾಜರಾದ ಒಟ್ಟು 179 ವಿದ್ಯಾರ್ಥಿಗಳಲ್ಲಿ ಶೇಕಡಾ 90-100 ಅಂಕಗಳನ್ನು 78 ವಿದ್ಯಾರ್ಥಿಗಳು, ಶೇಕಡಾ 80-89.8 ಅಂಕಗಳನ್ನು 60 ವಿದ್ಯಾರ್ಥಿಗಳು, 70-79.8 ಅಂಕಗಳನ್ನು 30 ವಿದ್ಯಾರ್ಥಿಗಳು, ಶೇಕಡಾ 60-69.8 ಅಂಕಗಳನ್ನು 8 ವಿದ್ಯಾರ್ಥಿಗಳು, 50-59.8 ಅಂಕಗಳನ್ನು 3 ವಿದ್ಯಾರ್ಥಿಗಳು ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದು ಗಮನ ಸೆಳೆದಿದ್ದಾರೆ.

ಶಾರದಾ ವಿದ್ಯಾಲಯವು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಸಾಧನೆ ಮಾಡಿದ್ದು, ಈಗಾಗಲೇ ವಿದ್ಯಾಲಯದ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಅನೇಕ ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿದ್ದಾರೆ.

ಪ್ರೊ. ಎಂ.ಬಿ.ಪುರಾಣಿಕ್ ನುಡಿಯುತ್ತಾರೆ….
ಶಾರದಾ ವಿದ್ಯಾಲಯ ಕಳೆದ 26 ವರ್ಷಗಳಲ್ಲಿ ನಿರಂತರ ಸಾಧನೆ ಮಾಡುತ್ತಲೇ ಬಂದಿದೆ. ಸಿಬಿ.ಎಸ್.ಇ. ಪರೀಕ್ಷೆಯಲ್ಲಿ ಈ ಬಾರಿ ಪರೀಕ್ಷೆಗೆ ಕುಳಿತ ಒಟ್ಟು 179 ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ಬಹಳ ಸಂತಸ ತಂದಿದೆ. 77% ವಿದ್ಯಾರ್ಥಿಗಳು 80% ಕ್ಕಿಂತಲೂ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರನ್ನು ಶಾರದಾ ವಿದ್ಯಾಲಯದ ಅಧ್ಯಕ್ಷರಾದ ಪ್ರೊ. ಎಂ.ಬಿ.ಪುರಾಣಿಕ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿರುತ್ತಾರೆ.

 

Recent News

Back To Top
error: Content is protected !!