ಇಂಧೋರ್: ಹಣಕಾಸು ವಂಚನೆಯಿಂದಾಗಿ 2017-18ನೇ ಸಾಲಿನಲ್ಲಿ 20 ಸಾರ್ವಜನಿಕ ವಲಯದ ಬ್ಯಾಂಕುಗಳು ರೂ.25,775 ಕೋಟಿಯಷ್ಟು ನಷ್ಟವನ್ನು ಅನುಭವಿಸಿವೆ ಎಂಬುದು ಮಾಹಿತಿ ಹಕ್ಕಿನಿಂದ ಬಹಿರಂಗಗೊಂಡಿದೆ.
ಮಾ.31ರಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ.6461.13 ಕೋಟಿ ನಷ್ಟವನ್ನು ಅನುಭವಿಸಿದೆ ಎಂಬುದು ಚಂದ್ರಶೇಖರ್ ಗೌಡ ಎಂಬುವವರು ಸಲ್ಲಿಸಿದ ಆರ್ಟಿಐನಿಂದ ತಿಳಿದು ಬಂದಿದೆ.
ನೀರವ್ ಮೋದಿ, ಮೆಹುಲ್ ಚೊಸ್ಕಿ, ಪಿಎನ್ಬಿ ಅಧಿಕಾರಿಗಳ ವಂಚನೆಯಿಂದಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಇಷ್ಟೊಂದು ಮೊತ್ತ ನಷ್ಟವಾಗಿದೆ. ಸಿಬಿಐ ಈ ಸಂಬಂಧ ತನಿಖೆ ನಡೆಸುತ್ತಿದೆ.
ಬ್ಯಾಂಕ್ ಆಫ್ ಬರೋಡಾಗೆ ರೂ.1,928.25 ಕೋಟಿ ನಷ್ಟವಾಗಿದ್ದು, ಅಲಹಾಬಾದ್ ಬ್ಯಾಂಕ್ಗೆ ರೂ.1,520.37 ಕೋಟಿ ನಷ್ಟವಾಗಿದ್ದು, ಆಂಧ್ರ ಬ್ಯಾಂಕ್ಗೆ ರೂ.1,303 ನಷ್ಟವಾಗಿದ್ದು, ಯುಸಿಓ ಬ್ಯಾಂಕ್ಗೆ ರೂ.1,224.64 ಕೋಟಿ ನಷ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.