ಸುಳ್ಯ: ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಯಾಗಿ ವೇದಿಕೆಯಲ್ಲಿದ್ದ ಶಿಕ್ಷಕಿ ದಿವ್ಯಾ ಕಾಳಮನೆಯವರು ಮಾತನಾಡಿ ಇದು ನಮ್ಮ ಭೂಮಿ-ಇದರ ರಕ್ಷಣೆಯ ಹೊಣೆ ನಮ್ಮದೇ ಆಗಿದೆ. ಹಾಗಾಗಿ ನಾವೆಲ್ಲರೂ ಪರಿಸರ ರಕ್ಷಣೆಯಲ್ಲಿ ಪಾಲ್ಗೊಳ್ಳೋಣ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿ ಪರಿಸರದಿಂದ ನಮಗೆ ಸಾಕಷ್ಟು ಕೊಡುಗೆಗಳಿವೆ. ಅದನ್ನು ಪಡೆದು ಕೊಳ್ಳುವುದರ ಜೊತೆಗೆ ನಾವು ಪರಿಸರಕ್ಕಾಗಿ ಏನಾದರೂ ಕೊಡುಗೆಗಳನ್ನು ನೀಡಬೇಕು. ಪ್ರತಿಯೊಬ್ಬರೂ ತಮ್ಮ ಅಳಿಲ ಸೇವೆಯನ್ನು ಮಾಡಬೇಕು. ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಸಾಗಲಿ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಇಕೋ-ಕ್ಲಬ್ ನ ನಿರ್ದೇಶಕರಾದ ಶಿಕ್ಷಕ ರಘುರಾಮ ಭಟ್ ಸಿ. ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಚರಣ್ರಾಜ್ ಎನ್ ಎಂ, ಅನು.ಡಿ, ಸ್ವಸ್ತಿಕ್, ಅರುಣ ಕೆ.ವಿ, ಪ್ರೀತಿ.ಯು, ಬ್ರಿಜೇಶ್ ಜೆ.ಎಸ್ ಮತ್ತು ಮನೀಷ್ ಟಿ.ಎನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದ ಕಾರ್ಯಕ್ರಮವು ಶಿಕ್ಷಕ ಪ್ರಸನ್ನ ಐವರ್ನಾಡು ಇವರ ಧನ್ಯವಾದದೊಂದಿಗೆ ಮುಕ್ತಾಯಗೊಂಡಿತು. ಶಿಕ್ಷಕಿ ಶ್ರೀಮತಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.