ನವದೆಹಲಿ: ನರೇಂದ್ರ ಮೋದಿ ಸರ್ಕಾರದ 4 ವರ್ಷಗಳ ಕಾರ್ಯಕ್ಷಮತೆ ‘ಅದ್ಭುತ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಬಣ್ಣಿಸಿದ್ದಾರೆ. ಪ್ರಗತಿ, ಹಣದುಬ್ಬರ, ವಿತ್ತೀಯ ಕೊರತೆ ಸೇರಿದಂತೆ ಎಲ್ಲಾ ಬೃಹತ್ ಆರ್ಥಿಕ ಅಂಶಗಳು ಗಣನೀಯ ಸುಧಾರಣೆಗಳನ್ನು ಕಂಡಿದೆ ಎಂದಿದ್ದಾರೆ.
ಯುಪಿಎ ಅವಧಿಯ ಅಂತ್ಯದಲ್ಲಿ ದೇಶದ ನೀತಿ ಪಾರ್ಶ್ವವಾಯುಗೆ ತುತ್ತಾಗಿತ್ತು ಮತ್ತು ನಿಂತು ಹೋದ ಸ್ಥಿತಿಯಲ್ಲಿತ್ತು, ಆದರೆ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಎಲ್ಲಾ ವಲಯದಲ್ಲೂ ಚೇತರಿಕೆ ಕಾಣುತ್ತಿದೆ ಎಂದಿದ್ದಾರೆ.
‘2014ರಲ್ಲಿ ಆರ್ಥಿಕತೆ ಕುಸಿದಿತ್ತು, ನಿರ್ವಹಣೆಯಿಲ್ಲದ ಬ್ಯಾಂಕ್ ಆಸ್ತಿ ಏರಿಕೆಯಾಗಿತ್ತು. ಸಂಪೂರ್ಣ ನೀತಿ ಪಾರ್ಶ್ವವಾಯುಗೊಂಡಿತ್ತು, ಸರ್ಕಾರ ನಿಂತು ಹೋದ ಸ್ಥಿತಿಯಲ್ಲಿತ್ತು. ಇಂತಹ ಪರಂಪರೆಯಲ್ಲಿ ಬೃಹತ್ ಆರ್ಥಿಕತೆಯಲ್ಲಿ ಗಣನೀಯ ಸುಧಾರಣೆ ಕಂಡಿದ್ದು ಅದ್ಭುತವೇ ಸರಿ’ ಎಂದಿದ್ದಾರೆ.
ಹಣದುಬ್ಬರ ಈಗ ಕಡಿಮೆಯಾಗಿದ, ವಿದೇಶಿ ವಿನಿಮಯ ಮೀಸಲು ಹೆಚ್ಚಾಗಿದೆ, ವಿತ್ತೀಯ ಕೊರತೆ ನಿಯಂತ್ರಣದಲ್ಲಿದೆ, ಪ್ರಗತಿ ಏರಿಕೆ ಕಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.