ಪಣಜಿ: ಮುಂಬಯಿ ಮತ್ತು ಗೋವಾ ನಡುವೆ ಪ್ರಯಾಣ ನಡೆಸುವವರಿಗೆ ಶುಭ ಸುದ್ದಿ ಸಿಕ್ಕಿದ್ದು, ಕ್ರೂಸ್ ಮುಖಾಂತರ ಜಲಮಾರ್ಗವಾಗಿ ಪ್ರಯಾಣಿಸುವ ಭಾಗ್ಯ ದೊರೆತಿದೆ.
ಈಗಾಗಲೇ ಮುಂಬಯಿ ಮತ್ತು ಗೋವಾದ ನಡುವೆ ಕ್ರೂಸ್ ಸೇವೆ ಸಮುದ್ರ ಟ್ರಯಲ್ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಈ ವರ್ಷದ ಸೆಪ್ಟಂಬರ್ನಿಂದ ಅಧಿಕೃತವಾಗಿ ಇದು ಸಾರ್ವಜನಿಕರಿಗಾಗಿ ಆರಂಭಗೊಳ್ಳಲಿದೆ.
ಪ್ರತಿ ಕ್ರೂಸ್ ಸುಮಾರು 400 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು, ರೂ.7500 ಟಿಕೆಟ್ ಮೊತ್ತವಾಗಿದ್ದು, ಊಟ ಮತ್ತು ಉಪಹಾರವನ್ನು ಒಳಗೊಂಡಿದೆ.
ಕ್ರೂಸ್ ಟೂರಿಸಂನ್ನು ಉತ್ತೇಜಿಸುವ ಸಲುವಾಗಿ ಈ ಸಾರಿಗೆ ವಿಧಾನವನ್ನು ಪರಿಚಯಿಸಲಾಗುತ್ತಿದೆ. ಕ್ರೂಸ್ ಟೂರಿಸಂನಿಂದ ಸಾವಿರಾರು ಉದ್ಯೋಗವಕಾಶಗಳೂ ಸೃಷ್ಟಿಯಾಗುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.