ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಇಂದು ತಮ್ಮ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರ ಈ ನಾಲ್ಕು ವರ್ಷದ ಆಡಳಿತಕ್ಕೆ ಜನರಿಂದ ಅಪಾರ ಬೆಂಬಲವೂ ದೊರೆತಿದೆ ಎಂಬುದನ್ನು ಹಲವಾರು ಸಮೀಕ್ಷೆಗಳು ಸಾಬೀತುಪಡಿಸಿವೆ.
ಟೈಮ್ಸ್ ಗ್ರೂಪ್ ನಡೆಸಿದ ‘ಪಲ್ಸ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ಶೇ.71.9ರಷ್ಟು ಜನರು ಈಗ ಚುನಾವಣೆ ನಡೆದರೆ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನೇ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಟ್ಟು 8,44,646 ಮಂದಿ ಈ ಸಮೀಕ್ಷೆಗೊಳಪಟ್ಟಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸರ್ಕಾರವೇ ಮರು ಆಯ್ಕೆಯಾಗಲಿದೆ ಎಂಬ ಅಭಿಪ್ರಾಯವನ್ನು ಶೇ.73.3ರಷ್ಟು ಜನರು ವ್ಯಕ್ತಪಡಿಸಿದ್ದಾರೆ. ಶೇ.47.4ರಷ್ಟು ಜನರು ಮೋದಿ ಸರ್ಕಾರ ‘ಅತ್ಯುತ್ತಮ ಸಾಧನೆ’ ಮಾಡಿದೆ ಎಂದಿದ್ದಾರೆ, ಶೇ.20.6ರಷ್ಟು ಜನರು ‘ಉತ್ತಮ’ ಎಂದಿದ್ದಾರೆ, ಶೇ.11.38ರಷ್ಟು ಜನರು ’ಸಾಧಾರಣ’ ಎಂದಿದ್ದಾರೆ. ಶೇ.20.55ರಷ್ಟು ಜನರು ‘ಕಳಪೆ’ ಎಂದಿದ್ದಾರೆ.
ಉದ್ಯೋಗ ಸೃಷ್ಟಿಸದೇ ಇರುವುದು, ಕಾಶ್ಮೀರ ನೀತಿ ಮೋದಿ ಸರ್ಕಾರ ಬಹುದೊಡ್ಡ ವೈಫಲ್ಯ ಎಂದು ಬಹುತೇಕ ಜನ ಅಭಿಪ್ರಾಯಿಸಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು ಎಂಬ ಇಂಗಿತವನ್ನು ಕೇವಲ ಶೇ.11.93ರಷ್ಟು ಜನರು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.