ಶ್ರೀನಗರ: ಸುಮಾರು 450 ತರಬೇತಿ ಹೊಂದಿದ ಲಷ್ಕರ್ ಇ ತೋಯ್ಬಾ ಉಗ್ರರು ಭಾರತದೊಳಕ್ಕೆ ನುಸುಳಲು ಸಜ್ಜಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಂಧಿತ ಉಗ್ರನೊಬ್ಬ ಎನ್ಐಎಗೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಲಷ್ಕರ್ ಉಗ್ರ ಝಬಿವುಲ್ಲಾ ಅಲಿಯಾಸ್ ಹಂಝ ತನಿಖೆಯ ವೇಳೆ ಎನ್ಐಎಗೆ 450 ಉಗ್ರರು ಒಳನುಸುಳಲು ಸಜ್ಜಾಗಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಿದ್ದಾನೆ ಎನ್ನಲಾಗಿದೆ.
ಈ 450 ಉಗ್ರರು ತನ್ನೊಂದಿಗೆ ದೌರಾ ಇ ಆಮ್ ವೇಳೆ ತಬೂಖ್ ಪ್ರದೇಶದ ಮನ್ಸೇರಾ ಎಂಬ ದಟ್ಟ ಅರಣ್ಯದಲ್ಲಿನ ಲಷ್ಕರ್ ಕ್ಯಾಂಪ್ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ, 2016ರಲ್ಲಿ ಹತ್ಯೆಯಾದ ಹಿಜ್ಬುಲ್ನ ಪೋಸ್ಟರ್ ಬಾಯ್ ಎಂದೇ ಕರೆಯಲ್ಪಡುತ್ತಿದ್ದ ಬುರ್ಹ್ವಾನ್ ವಾಣಿಯ ಹೆಸರಿನಲ್ಲಿ ಈ ಕ್ಯಾಂಪ್ ನಡೆದಿದೆ. ಆತನ ಹೆಸರಲ್ಲಿ ಯುವಕರನ್ನು ಉಗ್ರತನ ನೇಮಕ ಮಾಡಿಕೊಳ್ಳಲಾಗಿದೆ ಎಂದು ಈತ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.