ನವದೆಹಲಿ: ಭಾರತದೊಂದಿಗಿನ ಸಿಂಧೂ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪಾಕಿಸ್ಥಾನದ ನಿಯೋಗದೊಂದಿಗೆ ಯಾವುದೇ ತರನಾದ ನಿರ್ಣಯಕ್ಕೆ ಬರಲು ವಿಫಲವಾಗಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ.
ಪಾಕಿಸ್ಥಾನದ ಅಟಾರ್ನಿ ಜನರಲ್ ಅಸ್ತರ್ ಔಸಫ್ ಅಲಿ ಅವರ ನಿಯೋಗ ವಿಶ್ವಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟಲಿನ ಜಾರ್ಜೀವಾ ಅವರನ್ನು ಭೇಟಿಯಾಗಿ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮತ್ತು ಸಮಸ್ಯೆ ಪರಿಹಾರಕ್ಕೆ ಒಪ್ಪಂದದೊಳಗಿರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಿತ್ತು.
ಆದರೆ ಈ ಚರ್ಚೆ ಯಾವುದೇ ನಿರೀಕ್ಷಿತ ಫಲಗಳನ್ನು ನೀಡಿಲ್ಲ, ಮುಂದೆಯೂ ಉಭಯ ದೇಶಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಪಡುವುದಾಗಿ ವಿಶ್ವಬ್ಯಾಂಕ್ ಹೇಳಿದೆ.
ಭಾರತ ಇತ್ತೀಚಿಗೆ ಉದ್ಘಾಟನೆಗೊಳಿಸಿದ ಕಿಸಾನ್ಗಂಜ್ ಹೈಡ್ರೋಎಲೆಕ್ಟ್ರಿಕ್ ಪ್ಲಾಂಟ್ ಬಗ್ಗೆಯೂ ಪಾಕಿಸ್ಥಾನ ವಿಶ್ವಬ್ಯಾಂಕ್ ಎದುರು ತನ್ನ ಕಳವಳವನ್ನು ತೋಡಿಕೊಂಡಿದೆ. ಈ ಪ್ರಾಜೆಕ್ಟ್ನಿಂದ ಪಾಕಿಸ್ಥಾನದತ್ತ ಹರಿಯುವ ನೀರಿಗೆ ತೊಡಕು ಉಂಟಾಗಲಿದೆ ಎಂದು ಅದು ಆರೋಪಿಸುತ್ತಿದೆ. ಆದರೆ ಪಾಕಿಸ್ಥಾನದ ಎಲ್ಲಾ ಆರೋಪವನ್ನೂ ಭಾರತ ಸ್ಪಷ್ಟವಾಗಿ ತಳ್ಳಿ ಹಾಕಿದೆ.
‘ಸಿಂಧೂ ನದಿ ನೀರು ಒಪ್ಪಂದ ಭಾರತ ಮತ್ತು ಪಾಕಿಸ್ಥಾನದ ನಡುವೆ ಮಾನವ ಅಗತ್ಯತೆಯ ಸಮರ್ಥ ನೀರು ನಿರ್ವಹಣೆ ಮತ್ತು ಅಭಿವೃದ್ಧಿ ಗುರಿ ಸಾಧನೆಗೆ ಅಗತ್ಯ ಸಹಕಾರ ಚೌಕಟ್ಟುಗಳನ್ನು ನೀಡುವ ಅತೀ ಮುಖ್ಯ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ’ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.