ಭೋಪಾಲ್: ರಸ್ತೆ ಬದಿಯಲ್ಲಿ ಅನಾಥರಾಗಿ ತಿರುಗಾಡುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಸಹಾಯಕ್ಕೆ ಧಾವಿಸಿದ್ದಾರೆ ಅವರ ವಿದ್ಯಾರ್ಥಿಗಳು. ಅವರಿಗೆ ಉಳಿದುಕೊಳ್ಳಲು ನಿವಾಸ ನೀಡಿದ್ದು ಮಾತ್ರವಲ್ಲದೇ ಅವರ ಕುಟುಂಬಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ನಳಂದ ಶಾಲೆಯ ಭೌತಶಾಸ್ತ್ರ ಶಿಕ್ಷಕ ವಿಜಯ್ ಝೋಪೆ ಅವರು ಮನೆಯಿಲ್ಲದೆ ಫುಟ್ಪಾತ್ನಲ್ಲಿ ಮಲಗುತ್ತಿದ್ದಾರೆ. ಅವರನ್ನು ನೋಡಿದ ಅವರ ಹಳೆ ವಿದ್ಯಾರ್ಥಿಗಳು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಅಲ್ಲದೇ ಅವರ ಸ್ಥಿತಿಯ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಅದೀಗ ವೈರಲ್ ಆಗಿದೆ.
ಅತ್ಯಂತ ಅನುಕೂಲಸ್ಥ ಕುಟುಂಬದವರಾದರು ಅವರಿಗೆ ಈ ಸ್ಥಿತಿ ಬರಲು ಕಾರಣವೇನು ಎಂಬುದು ವಿದ್ಯಾರ್ಥಿಗಳಿಗೂ ತಿಳಿದಿಲ್ಲ. ಅವರ ತಂಗಿ ಯುಎಸ್ನಲ್ಲಿದ್ದಾರೆ, ಮಕ್ಕಳು ಇತರ ನಗರದಲ್ಲಿ ಇದ್ದಾರೆ ಎಂಬುದಷ್ಟೇ ತಿಳಿದಿದೆ. ಆದರೆ ಅವರ ಫೋನ್ ನಂಬರ್ ಕೂಡ ವಿಜಯ್ ಅವರ ಬಳಿ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅವರ ಕುಟುಂಬವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ
ಸದ್ಯಕ್ಕೆ ಅವರಿಗೆ ಆಹಾರ ತಿಂಡಿ, ಮನೆ ಎಲ್ಲಾ ವ್ಯವಸ್ಥೆಯನ್ನೂ ವಿದ್ಯಾರ್ಥಿಗಳೇ ಮಾಡಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.