ನವದೆಹಲಿ: ಅಟಲ್ ಪಿಂಚಣಿ ಯೋಜನೆ ಆರಂಭಗೊಂಡು 3 ವರ್ಷಗಳಾಗಿದ್ದು, ಯೋಜನೆಗೊಳಪಟ್ಟವರ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂದು ಕೇಂದ್ರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9ರಂದು ಕೋಲ್ಕತ್ತಾದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು, ಪ್ರಸ್ತುತ 1.10 ಕೋಟಿ ಜನರು ಈ ಯೋಜನೆಗೆ ಒಳಪಟ್ಟಿದ್ದಾರೆ.
ದೇಶದ ಶೇ.85ರಷ್ಟು ಕಾರ್ಯಪಡೆಯನ್ನು ಒಳಗೊಂಡ ಅಸಂಘಟಿತ ವಲಯದ ಕಾರ್ಮಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಮೋದಿ ಸರ್ಕಾರ ಈ ಪಿಂಚಣಿ ಯೋಜನೆಯನ್ನು ಆರಂಭ ಮಾಡಿದೆ.
ಈ ಯೋಜನೆಗೊಳಪಡುವವರು ಮಾಸಿಕ ರೂ.1೦೦೦, ರೂ.2೦೦೦, ರೂ 3೦೦೦, ರೂ 4000 ಅಥವಾ ರೂ 5೦೦೦ನ್ನು 6೦ ವರ್ಷದವರೆಗೆ ಪಾವತಿಸುತ್ತಾ ಬಂದರೆ 6೦ ವರ್ಷದ ಬಳಿಕ ಅದಕ್ಕೆ ಅನುಗುಣವಾದ ಮೊತ್ತದ ಪಿಂಚಣಿ ಅವರಿಗೆ ಅಥವಾ ಅವರ ಸಂಗಾತಿಗೆ ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.