ನವದೆಹಲಿ : ಕರ್ನಾಟಕದಲ್ಲಿ ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ಜನರಿಗೆ ಮತ್ತು ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಧನ್ಯವಾದಗಳನ್ನು ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, ಬಿಜೆಪಿಯನ್ನು ಏಕೈಕ ಅತಿ ದೊಡ್ಡ ಪಕ್ಷವನ್ನಾಗಿಸಿದ ಮತ್ತು ಬಿಜೆಪಿಯ ಅಭಿವೃದ್ಧಿಯ ಅಜೆಂಡಾವನ್ನು ಅಭೂತಪೂರ್ವವಾಗಿ ಬೆಂಬಲಿಸಿದ ಕರ್ನಾಟಕದ ಎಲ್ಲಾ ನನ್ನ ಸಹೋದರ ಮತ್ತು ಸಹೋದರಿಯರಿಗೆ ನನ್ನ ಧನ್ಯವಾದಗಳು. ಪ್ರತಿ ಕ್ಷಣ ಬಿಜೆಪಿಯ ವಿಜಯಕ್ಕಾಗಿ ದಣಿವರಿಯದೆ ದುಡಿದ ಬಿಜೆಪಿ ಕರ್ನಾಟಕದ ಕಾರ್ಯಕರ್ತರಿಗೆ ನನ್ನ ಸೆಲ್ಯೂಟ್ ಎಂದಿದ್ದಾರೆ.
I thank my sisters and brothers of Karnataka for steadfastly supporting the BJP’s development agenda and making BJP the single largest party in the state. I salute the stupendous work of @BJP4Karnataka Karyakartas who toiled round the clock and worked for the party.
— Narendra Modi (@narendramodi) May 15, 2018
ಟ್ವೀಟ್ ಮಾಡಿರುವ ಅಮಿತ್ ಶಾ, ಬಿಜೆಪಿಯನ್ನು ಏಕೈಕ ಅತಿ ದೊಡ್ಡ ಪಕ್ಷವನ್ನಾಗಿಸಲು ಮತದಾನ ಮಾಡಿದ ಕರ್ನಾಟಕದ ಜನತೆಗೆ ನನ್ನ ಧನ್ಯವಾದಗಳು. ಕಾಂಗ್ರೆಸ್ನ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಮತ್ತು ಜಾತಿ ವಿಭಜನೆಯ ರಾಜಕೀಯವನ್ನು ಕರ್ನಾಟಕ ಸಂಪೂರ್ಣವಾಗಿ ತಿರಸ್ಕರಿಸಿದೆ ಎಂಬುದು ಈ ಜನಾದೇಶದಿಂದ ಸಾಬೀತಾಗಿದೆ.
ಅವಿರತವಾಗಿ ಶ್ರಮಿಸಿದ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಕರ್ನಾಟಕ ಘಟಕದ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು. ದೇಶದ ಇತರ ಭಾಗದಂತೆ ಕರ್ನಾಟಕದ ಶ್ರೇಷ್ಠ ಭೂಮಿಯೂ ಕೂಡಾ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ, ಪಾರದರ್ಶಕ ಮತ್ತು ಅಭಿವೃದ್ಧಿ ಪರ ಆಡಳಿತದ ಮೇಲೆ ತನ್ನ ಭರವಸೆಯನ್ನು ತೋರಿಸಿದೆ ಎಂದಿದ್ದಾರೆ.
I congratulate each & every Karyakarta of @BJP4Karnataka unit and Shri B S Yeddyurappa ji for their relentless efforts. Like rest of the nation, the great land of Karnataka has shown their unwavering trust in PM @narendramodi’s clean, transparent and pro-development governance.
— Amit Shah (@AmitShah) May 15, 2018
I thank people of Karnataka for voting BJP as the single largest party. This mandate clearly reflects that Karnataka has rejected Congress’s corruption, dynastic politics and divisive casteism.
— Amit Shah (@AmitShah) May 15, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.