ನವದೆಹಲಿ: 1998ರಲ್ಲಿ ಭಾರತ ರಾಜಸ್ಥಾನದ ಪೋಕ್ರಾನ್ನಲ್ಲಿ ನಡೆಸಿದ್ದ ಐತಿಹಾಸಿಕ ಪರಮಾಣು ಪರೀಕ್ಷೆಗೆ 20 ವರ್ಷಗಳು ಆಗಿವೆ. ಮೇ 11 ಮತ್ತು 13ರಂದು ಈ ಪರೀಕ್ಷೆಯನ್ನು ನಡೆಸಲಾಗಿತ್ತು
ಮೇ 11ರಂದು ಸಂಜೆ 3.45ರ ಸುಮಾರಿಗೆ 3 ಸ್ಫೋಟಗಳನ್ನು ಭಾರತ ನಡೆಸಿತ್ತು, ಮೇ 13ರಂದು 2 ನ್ಯೂಕ್ಲಿಯರ್ ಡಿವೈಸ್ಗಳನ್ನು ಸ್ಫೋಟ ಮಾಡಲಾಗಿತ್ತು.
ಅತ್ಯಂತ ನಿಗೂಢವಾಗಿ ನಡೆದ ಈ ಪರಮಾಣು ಸ್ಫೋಟದ ಬಗ್ಗೆ ಕೇವಲ ಐದು ಮಂದಿಗಷ್ಟೇ ತಿಳಿದಿತ್ತು. ವಿಶೇಷವೆಂದರೆ ಪರೀಕ್ಷೆ ನಡೆಯುವ ಒಂದು ತಿಂಗಳ ಮೊದಲಷ್ಟೇ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಕೆ ರಘನಾಥ್ ಅವರು, ಭಾರತಕ್ಕೆ ಪರಮಾಣು ಸ್ಫೋಟ ನಡೆಸುವ ಯಾವುದೇ ಯೋಜನೆಯಿಲ್ಲ ಎಂದು ಅಮೆರಿಗಾಗೆ ಹೇಳಿದ್ದರು.
ಪರಮಾಣು ಪರೀಕ್ಷೆ ನಡೆಸಿದ ಬಳಿಕ ಜಾಗತಿಕ ವಲಯದಿಂದ ಎದುರಾದ ಎಲ್ಲಾ ಸವಾಲುಗಳನ್ನು ಭಾರತ ಮೆಟ್ಟಿ ನಿಂತು ಜಗತ್ತಿಗೆ ತಾನು ಏನು ಎಂಬುದನ್ನು ತೋರಿಸಿಕೊಟ್ಟಿತ್ತು.
ಭಾರತವನ್ನು ಪರಮಾಣು ಶಕ್ತಿಯಾಗಿಸಿದ ಈ ದಿನವನ್ನು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು, ಇದರ ರುವಾರಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ನಾವು ಸ್ಮರಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.