ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಮತ್ತು ಬಜರಂಗದಳ ವತಿಯಿಂದ ಕೋಮುಗಲಭೆ ಪ್ರಕರಣ ಹಿಂತೆಗೆತ ಬಗ್ಗೆ ಸರ್ಕಾರದ ವಿರುದ್ದ ಪ್ರತಿಭಟನಾ ಮನವಿಯನ್ನು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ನೀಡಿದರು.
ರಾಜ್ಯದಲ್ಲಿ ಶಾಂತಿಪ್ರಿಯರು ಸ್ವಚ್ಚಂದದ ಬದುಕು ಸವೆಸಲು ಯೋಚಿಸುವುದು ಇನ್ನು ದುಸ್ತರವೇ ಸರಿ. ಅಶಾಂತಿ, ಅನಾಚಾರ, ಅನೈತಿಕತೆ, ಭಯೋತ್ಪಾಧನಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರಸ್ತುತ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ಸರ್ಕಾರ ಮಾಡುತ್ತಿದೆ. ಸರ್ಕಾರವು ಒಂದು ಕೋಮಿನ ಜನರ ಓಲೈಕೆಗಾಗಿ ವ್ಯಾಪ್ತಿ ಮೀರಿ ವರ್ತಿಸುತ್ತಿದೆ. ಅಪರಾಧಿಗೆ ಶಿಕ್ಷೆಯಾಗದೆ ಕಾನೂನಿಗೆ ತಿದ್ದುಪಡಿ ತಂದು, ಆತನ ಪರ ಸರಕಾರ ನಿಲ್ಲುವ ಪ್ರಯತ್ನ ನಡೆಸುತ್ತದೆ ಎಂದು ಆರೋಪಿಸಲಾಗಿದೆ.
೨೦೦೯ರಲ್ಲು ಮೈಸೂರಿನ ಉದಯಗಿರಿ ಹಾಗೂ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಮುಗಲಭೆ ಉಂಟು ಮಾಡಿ ಕರ್ತವ್ಯನಿರತ ಪೊಲೀಸರು ಮತ್ತು ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡಿ ಅಪಾರ ಆಸ್ತಿಪಾಸ್ತಿ ನಾಶ ನಷ್ಟ ಮಾಡಿದ ೨೧೪ ಮಂದಿ ಮೇಲಿನ ೪೦ ಕೇಸುಗಳನ್ನು ಲೀಲಾಜಾಲವಾಗಿ ಹಿಂಪಡೆದು ಸಾರ್ವಜನಿಕ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟ ತುಘಲಕ್ ಸರಕಾರ ಇದಾಗಿದೆ.
ಈ ಸರ್ಕಾರವನ್ನು ಎಚ್ಚರಿಸಿ, ಇಲ್ಲವೇ ವಜಾಗೊಳಿಸಿ ಈ ಮೇಲಿನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಸೂಕ್ತ ಶಿಕ್ಷೆ ನೀಡಲು ಪೊಲೀಸ್ ಇಲಾಖೆಗೆ ಸೂಚಿಸುವಂತೆ ಆಗ್ರಹಿಸಿದೆ.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ನ ಪುತ್ತೂರು ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ, ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಸಾಲ್ಯಾನ್, ಭಜರಂಗದಳ ಪ್ರಮುಖರಾದ ಗುರುರಾಜ್ ಬಂಟ್ವಾಳ ಮತ್ತು ಪ್ರದೀಪ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.