ನವದೆಹಲಿ: ಭಾರತದ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಅಂತಾರಾಷ್ಟ್ರೀಯ ಐಸಿಆರ್ಐಎಸ್ಎಟಿ (The International Crops Research Institute for the Semi-Arid Tropics) ಅತ್ಯುನ್ನತ ಸಂಶೋಧನಾ ಪ್ರಶಸ್ತಿ ‘ದಿ ಡೊರೀನ್ ಮಾರ್ಗರೇಟ್ ಮಶ್ಲೇರ್ ಅವಾರ್ಡ್ 2018’ನನ್ನು ನೀಡಿ ಗೌರವಿಸಿದೆ.
ಡಾ.ಮಮತಾ ಶರ್ಮಾ ಮತ್ತು ಡಾ.ಪೂಜಾ ಭಟ್ನಾಗರ್ ಮಾತುರ್ ಅವರುಗಳು ಪ್ಲಾಂಟ್ ಪತೋಲಜಿ ಮತ್ತು ಬಯೋಟೆಕ್ನಾಲಜಿಯಲ್ಲಿ ನಡೆಸಿದ ಮಹತ್ವದ ಸಂಶೋಧನೆಗಳಿಗೆ ಈ ಅವಾರ್ಡ್ ದೊರೆತಿದೆ.
ಭವಿಷ್ಯದಲ್ಲಿ ಬೆಳೆಗಳು ರೋಗನಿರೋಧಕವಾಗಿರಲು ಮತ್ತು ಹೆಚ್ಚಿನ ಇಳುವರಿಯನ್ನು ನೀಡಲು ಬೇಕಾದ ಸಂಶೋಧನೆಯನ್ನು ಡಾ.ಮಮತಾ ಮಾಡಿದ್ದಾರೆ. ಕಡಲೆ ಬೀಜ ಸೇರಿದಂತೆ ಇತರ ೫೦೦ ಬೆಳಗಳಿಗೆ ರೋಗ ಹರಡದಂತೆ ನಡೆಸಿದ ಸಂಶೋಧನಾ ತಂಡದ ನೇತೃತ್ವವನ್ನು ಇವರು ವಹಿಸಿದ್ದರು.
ಡಾ.ಪೂಜಾ ಅವರು ಬಯೋಟೆಕ್ನಾಲಜಿ ಸೊಲ್ಯೂಷನ್ನಲ್ಲಿ ಅತ್ಯುನ್ನತವಾದ ಸಂಶೋಧನೆಯನ್ನು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.