ನವದೆಹಲಿ: ಸ್ವೀಡನ್ ಕಂಪನಿಗಳು ಭಾರತದಲ್ಲಿ 1.1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿವೆ.
ಸ್ವೀಡನ್ನ ಪ್ರಮುಖ ಕಂಪನಿಗಳಾದ ವೋಲ್ವೊ, ಇಕೆಯ, ಅಸ್ಟ್ರಝನೆಕಾ ಇತ್ಯಾದಿ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ಉತ್ಸುಹುಕವಾಗಿದೆ.
‘ಕಳೆದ ಮೂರು ವರ್ಷಗಳಲ್ಲಿ 1.5 ಬಿಲಿಯನ್ ಡಾಲರ್ ಹೂಡಿಕೆಗೆ ಕಂಪನಿಗಳು ಬದ್ಧವಾಗಿದ್ದು, ಮುಂದಿನ ಎರಡು ವರ್ಷದಲ್ಲಿ ಮತ್ತಷ್ಟು ಹೂಡಿಕೆಗೆ ಸಜ್ಜಾಗಿವೆ. ಕಳೆದ ದಶಕಗಳಿಗಿಂತ ಹೆಚ್ಚು ಈ ಬಾರಿ ಭಾರತದಲ್ಲಿ ಹೂಡಿಕೆ ಮಾಡಲು ಸ್ವೀಡನ್ ನಿರ್ಧರಿಸಿದೆ’ ಎಂದು ಸ್ವೀಡನ್ ಭಾರತ ಟ್ರೇಡ್ ಕಮಿಷನರ್ ಕರ್ಸ್ಟೆನ್ ಗ್ರಾನ್ಬ್ಲಾಡ್ ಹೇಳಿದ್ದಾರೆ.
ವೋಲ್ವೋ ಗ್ರೂಪ್ ಮುಂದಿನ ಮೂರು ವರ್ಷದಲ್ಲಿ ಭಾರತದಲ್ಲಿ 250 ಮಿಲಿಯನ್ ಹೂಡಿಕೆ ಮಾಡಲು ನಿರ್ಧರಿಸಿದೆ. ಅಸ್ಟ್ರಝನೆಕಾ 90 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವೀಡನ್ ಭೇಟಿಯ ಹಿನ್ನಲೆಯಲ್ಲಿ ಕರ್ಸ್ಟೆನ್ ಗ್ರಾನ್ಬ್ಲಾಡ್ ಈ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.