ನವದೆಹಲಿ: ಪ್ರಸ್ತುತ ನಂಬಲಾದಂತೆ 200 ವರ್ಷಗಳ ಬರ ಅಲ್ಲ, ಬರೋಬ್ಬರಿ 900 ವರ್ಷಗಳ ಬರ ಸಿಂಧೂ ನಾಗರಿಕತೆಯನ್ನು ಅವಸಾನ ಮಾಡಿತು ಎಂದು ಖರಗ್ಪುರ ಐಐಟಿಯ ಭೂವಿಜ್ಞಾನ ಮತ್ತು ಜಿಯೋಫಿಸಿಕ್ಸ್ ಅಧ್ಯಯನವೊಂದು ತಿಳಿಸಿದೆ.
ವಾಯುವ್ಯ ಹಿಮಾಲಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಭೂಮಿಗಳು ಬರಡಾಯಿತು, ನೀರಿನ ಮೂಲ ಬತ್ತಿ ಹೋಯಿತು, ಇದುವೇ ನಾಗರಿಕತೆಯನ್ನು ನಾಶ ಮಾಡಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ವಿಜ್ಞಾನಿಗಳ ಕಳೆದ 5 ಸಾವಿರ ವರ್ಷಗಳ ಹವಮಾನಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು, 900 ವರ್ಷಗಳ ಭೀಕರ ಬರದಿಂದ ಸಿಂಧೂನಾಗರಿಕತೆ ಅಂತ್ಯವಾಗಿದೆ ಎಂದಿದೆ.
ಈ ವರದಿಯನ್ನು ಪ್ರತಿಷ್ಟಿತ ಕ್ವಾರ್ಟನರಿ ಇಂಟರ್ನ್ಯಾಷನಲ್ ಜರ್ನಲ್ನಲ್ಲಿ ಈ ವರ್ಷ ಪ್ರಕಟಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.