×
Home About Us Advertise With s Contact Us

ರೈಲ್ವೇ ಪ್ರಯಾಣಿಕರಿಗೆ ದೂರು ದಾಖಲಿಸಲು ಹೊಸ ಆ್ಯಪ್

ನವದೆಹಲಿ: ರೈಲ್ವೇ ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿಯೇ ಭಾರತೀಯ ರೈಲ್ವೇ ಮೊಬೈಲ್ ಅಪ್ಲಿಕೇಶನ್‌ವೊಂದನ್ನು ಹೊರತರುತ್ತಿದೆ. ‘ಮದದ್’(Mobile Application for Desired Assistance During travel) ಆ್ಯಪ್ ಈ ತಿಂಗಳ ಕೊನೆಗೆ ಜಾರಿಗೆ ಬರುತ್ತಿದೆ.

ಈ ಆ್ಯಪ್ನಲ್ಲಿ ಪ್ರಯಾಣಿಕರು ಆಹಾರ ಸಮಸ್ಯೆ, ಟಾಯ್ಲೆಟ್ ನೈರ್ಮಲ್ಯ, ತುರ್ತು ಅಗತ್ಯ ಹೀಗೆ ಎಲ್ಲಾ ವಿಷಯಗಳ ಬಗ್ಗೆಯೂ ದೂರುಗಳನ್ನು ದಾಖಲಿಸಬಹುದಾಗಿದೆ. ಇಲ್ಲಿ ದಾಖಲಾದ ದೂರು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ. ತಕ್ಷಣವೇ ಕ್ಷಿಪ್ರಗತಿಯಲ್ಲಿ ಸಮಸ್ಯೆಗಳನ್ನು ನಿವಾರಿಸುವ ಪ್ರಕ್ರಿಯೆ ಆರಂಭವಾಗುತ್ತದೆ.

ಪ್ರಸ್ತುತ ಟ್ವಿಟರ್ ಮೂಲಕ ಹೆಚ್ಚಿನ ಪ್ರಯಾಣಿಕರು ದೂರುಗಳನ್ನು ದಾಖಲು ಮಾಡುತ್ತಿದ್ದಾರೆ. ರೈಲ್ವೇ ಸಚಿವಾಲಯ ಈ ದೂರುಗಳಿಗೆ ಸ್ಪಂದಿಸುತ್ತಿದೆ. ಇದೀಗ ಅದಕ್ಕೆಂದೇ ಹೊಸ ಆಪ್ ಬಿಡುಗಡೆಯಾಗುತ್ತಿದ್ದು, ದೂರು ನೀಡುವ ಕಾರ್ಯ ಮತ್ತಷ್ಟು ಸುಲಲಿತವಾಗುತ್ತಿದೆ.

 

Recent News

Back To Top
error: Content is protected !!