ನವದೆಹಲಿ: ದೇಶಕ್ಕಾಗಿ ಜೀವನ ಮುಡಿಪಾಗಿಡುವ ಯೋಧರಿಗೆ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಸಿಗುವುದು ತುಂಬಾ ಕಡಿಮೆ. ವರ್ಷದಲ್ಲಿ ಎರಡೂವರೆ ತಿಂಗಳುಗಳು ಮಾತ್ರ ಇವರು ಮನೆಗೆ ತೆರಳಬಹುದು. ಅಂದರೆ 30 ವರ್ಷದ ಸೇವಾ ಜೀವನದಲ್ಲಿ ಕೇವಲ 5 ವರ್ಷ ಮಾತ್ರ ಇವರು ತಮ್ಮವರೊಂದಿಗೆ ಕಾಲಕಳೆಯುತ್ತಾರೆ.
ಯೋಧರ ಈ ಸಮಸ್ಯೆಯನ್ನು ಅರ್ಥಮಾಡಿಕೊಂಡಿರುವ ಬಿಎಸ್ಎಫ್ ಹೊಸ ಯೋಜನೆಯೊಂದನ್ನು ಆರಂಭಿಸಿದೆ, ದೇಶದಾದ್ಯಂತ 190 ಜವಾನ್ ಗೆಸ್ಟ್ಹೌಸ್ಗಳನ್ನು ನಿರ್ಮಿಸಲು ನಿರ್ಧರಿಸಿದೆ.
ಹೊಸದಾಗಿ ಮದುವೆಯಾದ ಯೋಧರ ಒಂಟಿತನವನ್ನು ದೂರ ಮಾಡುವ ಸಲುವಾಗಿ ಈ ಗೆಸ್ಟ್ ಹೌಸ್ ನಿರ್ಮಾಣ ಮಾಡಲಾಗಿದೆ. ನಿಗದಿತ ಸಮಯದವರೆಗೆ ತಮ್ಮ ಸಂಗಾತಿಯೊಂದಿಗೆ ಯೋಧರು ಇಲ್ಲಿ ವಾಸಮಾಡಬಹುದು.
ಅಡುಗೆ ಮನೆ, ಕೋಣೆ, ಬಾತ್ ರೂಂ, ಟೆಲಿವಿಷನ್ ಸೌಲಭ್ಯಗಳು ಈ ಗೆಸ್ಟ್ಹೌಸ್ನಲ್ಲಿರಲಿದೆ.
ಹೊಸದಾಗಿ ಮದುವೆಯಾದ ಯೋಧರಿಗೆ ಪ್ರಮುಖವಾಗಿ ಇಲ್ಲಿ ಕೆಲದಿನಗಳನ್ನು ಕಳೆಯಲು ಅವಕಾಶಕೊಡಲಾಗುತ್ತದೆ. ಶಾಲೆಗಳ ರಜಾದಿನಗಳಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಕಾಲ ಕಳೆಯಲು ಬಯಸುವವರಿಗೂ ಗೆಸ್ಟ್ಹೌಸ್ ಸಾಧ್ಯವಾದರೆ ನೀಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.