ನವದೆಹಲಿ: ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬಿಜೆಪಿ ಕಟ್ಟಲು ಮತ್ತು ಬಲಿಷ್ಠ ಭಾರತ ನಿರ್ಮಾಣಕ್ಕೆ ನಿರಂತರ ಪರಿಶ್ರಮಪಟ್ಟ ಕಾರ್ಯಕರ್ತರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಸರಣಿ ಟ್ವಿಟ್ ಮಾಡಿರುವ ಮೋದಿ ’ಕಾರ್ಯಕರ್ತರು ನಮಗೆಲ್ಲಾ. ಅವರು ಪಕ್ಷದ ಹೃದಯ ಮತ್ತು ಆತ್ಮ. ಅವರ ಬೆವರು ಪಕ್ಷವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಅವರ ಶ್ರಮದ ಫಲವಾಗಿ ಜನರ ಸೇವೆ ಮಾಡುವ ಸೌಭಾಗ್ಯ ನಮಗೆ ಲಭಿಸಿದೆ. ಬಿಜೆಪಿ ನವಭಾರತದ ಪಕ್ಷ. ಎಲ್ಲಾ ವಯೋಮಾನದ ಜನರ ಆಶೀರ್ವಾದ ಪಡೆದು ಪುಣೀತರಾಗಿದ್ದೇವೆ’ ಎಂದಿದ್ದಾರೆ.
‘ದೇಶದ ವೈವಿಧ್ಯತೆ, ವಿಭಿನ್ನತೆ, ಸಂಸ್ಕೃತಿ ಎಲ್ಲದಕ್ಕೂ ಹೆಚ್ಚಾಗಿ ೧೨೫ ಕೋಟಿ ಭಾರತೀಯರ ಬಲಿಷ್ಠತೆಯಲ್ಲಿ ನಂಬಿಕೆಯಿಟ್ಟಿರುವ ಪಕ್ಷ ನಮ್ಮದು’ ಎಂದಿದ್ದಾರೆ.
ನರೇಂದ್ರ ಮೋದಿ ಆಪ್ ಮೂಲಕ ಕಾರ್ಯಕರ್ತರೊಂದಿಗೆ ಸಂಭಾಷಣೆ ನಡೆಸುವುದನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.